ತಿರುವನಂತಪುರಂ: ಇನ್ಮುಂದೆ ಕೇಂದ್ರ ಸರ್ಕಾರ ನೀಡುವ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ಪಿಂಚಣಿಗಳ ಕೇಂದ್ರ ಪಾಲನ್ನು ಗ್ರಾಹಕರ ಖಾತೆಗೆ ನೇರವಾಗಿ ಪಾವತಿಸಲಿದೆ.
ಇದುವರೆಗೆ ರಾಜ್ಯ ಸರ್ಕಾರದ ಮೂಲಕವೇ ಪಿಂಚಣಿ ನೀಡಲಾಗುತ್ತಿತ್ತು. ಕೇಂದ್ರ ನೀಡುವ ಹಣದ ಲಾಭವನ್ನು ರಾಜ್ಯ ಪಡೆಯಬಾರದು ಎಂಬ ನಿರ್ಧಾರದ ಭಾಗವಾಗಿಯೇ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರವು ಹೊಸ ಆರ್ಥಿಕ ವರ್ಷವಾದ ಏಪ್ರಿಲ್‍ನಿಂದ ಸುಧಾರಣೆಯನ್ನು ಜಾರಿಗೆ ತಂದಿದೆ.
ಇಲ್ಲಿಯವರೆಗೆ ರಾಜ್ಯ ಸರ್ಕಾರ ಎಲ್ಲರಿಗೂ 1600 ರೂ.ಗಳನ್ನು ನೀಡಿ ನಂತರ ಕೇಂದ್ರದ ಪಾಲು ತೆಗೆದುಕೊಳ್ಳುತ್ತಿತ್ತು. ಇನ್ನು ಮುಂದೆ ಕೇರಳ ಮತ್ತು ಕೇಂದ್ರ ಪ್ರತ್ಯೇಕವಾಗಿ ಹಣ ಜಮಾ ಮಾಡುವುದರಿಂದ ಫಲಾನುಭವಿಗಳಿಗೆ ಒಟ್ಟಾಗಿ 1600 ರೂ.ಲಭಿಸಲಿದೆ. ಸದ್ಯ ರಾಜ್ಯ ಸರ್ಕಾರ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಪಿಂಚಣಿ ಮೊತ್ತವನ್ನು ಒಟ್ಟಾಗಿ ನೀಡುತ್ತಿದೆ.
80 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಡೆಯುವ ವೃದ್ಧಾಪ್ಯ ವೇತನದಲ್ಲಿ ರಾಜ್ಯ ಸರ್ಕಾರ 1400 ರೂಪಾಯಿ ಮತ್ತು ಕೇಂದ್ರದಿಂದ 200 ರೂಪಾಯಿಗಳನ್ನು ನೀಡಲಾಗುತ್ತದೆ. 80 ವರ್ಷ ಮೇಲ್ಪಟ್ಟವರಿಗೆ ಪಿಂಚಣಿಯಾಗಿ ರಾಜ್ಯ 1100 ರೂ., ಕೇಂದ್ರ ಸರಕಾರ 500 ರೂ. 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ರಾಷ್ಟ್ರೀಯ ವಿಧವಾ ಪಿಂಚಣಿಗಾಗಿ ರಾಜ್ಯ ಸರ್ಕಾರವು 1300 ರೂಗಳನ್ನು ಒದಗಿಸುತ್ತದೆ, ಆದರೆ ಕೇಂದ್ರವು 300 ರೂಪಾಯಿಗಳನ್ನು ಮಾತ್ರ ನೀಡುತ್ತದೆ.
80 ವರ್ಷ ಮೇಲ್ಪಟ್ಟವರ ವಿಧವಾ ಪಿಂಚಣಿ ಮೊತ್ತದಲ್ಲಿ ರಾಜ್ಯ ಸರ್ಕಾರ 1100 ರೂಪಾಯಿ ಮತ್ತು ಕೇಂದ್ರ ಸರ್ಕಾರ 500 ರೂಪಾಯಿಗಳನ್ನು ನೀಡುತ್ತದೆ. ಈ ಬಾರಿ ರಾಜ್ಯದ ಹಲವು ಮಂದಿ ಬ್ಯಾಂಕ್ ಖಾತೆಗೆ ತಲಾ 1400 ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಹೊಸ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಪಿಂಚಣಿ ವಿತರಣೆಗೆ ಕೇಂದ್ರ ನೀಡುತ್ತಿರುವ ಅಲ್ಪ ಮೊತ್ತವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಸುಧಾರಣೆ ಸಹಕಾರಿಯಾಗಲಿದೆ ಎಂಬುದು ರಾಜ್ಯ ಸರ್ಕಾರದ ಪ್ರತಿಕ್ರಿಯೆ ನೀಡಿದೆ.
ರಾಜ್ಯದಲ್ಲಿ ಒಟ್ಟು ಅರ್ಧ ಲಕ್ಷ ಜನ ಕಲ್ಯಾಣ ಪಿಂಚಣಿ ಮೊತ್ತ ಪಡೆಯುತ್ತಿದ್ದರೆ, ಕೇಂದ್ರದ ಪಾಲು ಸೇರಿಸಿ 4.7 ಲಕ್ಷ ಜನರಿಗೆ ಪಿಂಚಣಿ ನೀಡಲಾಗುತ್ತದೆ.
ಕಲ್ಯಾಣ ಪಿಂಚಣಿ; ಇನ್ನು ಮುಂದೆ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಕೇಂದ್ರ ಹಂಚಿಕೆ
0
ಏಪ್ರಿಲ್ 13, 2023