ಕಾಸರಗೋಡು: ಕೇರಳ ರಾಜ್ಯ ಖಾಸಗಿ ಆಸ್ಪತ್ರೆ ನೌಕರರ ಫೆಡರೇಷನ್ (ಸಿಐಟಿಯು) ಆಶ್ರಯದಲ್ಲಿ ಏ. 27ರಂದು ಸೆಕ್ರೆಟೇರಿಯೆಟ್ ಎದುರು ನಡೆಯಲಿರುವ ಪ್ರತಿಭಟನಾ ಮೆರವಣಿಗೆ ಹಾಗೂ ಇದರ ಪ್ರಚಾರಾರ್ಥ ಕಾಸರಗೋಡು ಹೊಸ ಬಸ್‍ನಿಲ್ದಾಣ ವಠಾರದಲ್ಲಿ ಭಾನುವಾರ ಆಯೋಜಿಸಲಾದ ವಾಹನ ಪ್ರಚಾರ ಜಾಥಾವನ್ನು ಮಾಜಿ ಕಾರ್ಮಿಕ ಸಚಿವ ಹಾಗೂ ಸಿಐಟಿಯು ರಾಜ್ಯ ಉಪಾಧ್ಯಕ್ಷ, ಶಾಸಕ ಟಿ.ಪಿ. ರಾಮಕೃಷ್ಣ ಉದ್ಘಾಟಿಸಿದರು.
ಜಾಥಾ ಮುಖಂಡ ಎ. ಮಾಧವನ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ನಾಲು ದಿವಸಗಳ ಕಾಳ ಜಿಲ್ಲೆಯಲ್ಲಿ ಪರ್ಯಟನೆನಡೆಸಲಿರುವ ಜಾಥಾಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
2017 ರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕನಿಷ್ಠ ವೇತನ ನೌಕರರಿಗೆ ತಕ್ಷಣವೇ ಲಭ್ಯವಾಗಬೇಕು, ಹಿಂದಿನ ಕನಿಷ್ಠ ವೇತನದ ಅವಧಿ ಮುಗಿದ ಸಂದರ್ಭದಲ್ಲಿ ವೇತನ ಪರಿಷ್ಕರಣೆಗೆ ತಕ್ಷಣದ ಹೊಸ ಕಾರ್ಯವಿಧಾನಗಳನ್ನು ಪ್ರಾರಂಭಿಸಬೇಕು, ಅಂಗಸಂಸ್ಥೆಗಳಲ್ಲಿ ವೇತನ ಪರಿಷ್ಕರಣೆ ತಕ್ಷಣದ ಅನುಷ್ಠಾನಗೊಳಿಸಬೇಕು ಮುಂತಾದ ಬೇಡಿಕೆ ಮುಂದಿರಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸೆಕ್ರೆಟೇರಿಯೆಟ್ ಎದುರು ಪ್ರತಿಭಟನೆ-ವಾಹನ ಪ್ರಚಾರಕ್ಕೆ ಚಾಲನೆ
0
ಏಪ್ರಿಲ್ 16, 2023