ಕಾಸರಗೊಡು : ಸಂಸ್ಕಾರ ಸಂಘಟನೆ ಸೇವೆಯಾದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ ತುಮಕೂರು , ನೇತ್ರಾವತಿ ವಲಯ ಮಂಗಳೂರು ಇದರ ನೇತೃತ್ವದಲ್ಲಿ 12 ದಿನಗಳ ಕಾಲ ಜರಗುವ "ವಸಂತ ಶಿಬಿರ"ವನ್ನು ಮನ್ನಿಪಾಡಿಯ" ಸತ್ಯ ನಿಲಯ"ದಲ್ಲಿ ಆರಂಭಿಸಲಾಯಿತು.
ಕೆ. ಎಸ್. ಇ. ಬಿ ಅಸಿಸ್ಟೆಂಟ್ ಎಂಜಿನಿಯರ್ ನಾಗರಾಜ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಒತ್ತಡದ ಜೀವನ ನಮ್ಮದಾಗಿದ್ದು, ಯೋಗ, ಪ್ರಾಣಾಯಾಮಗಳಿಂದ ಇದನ್ನು ಸರಳಗೊಳಿಸಲು ಸಾಧ್ಯ. ಹಲವು ರೋಗಗಳಿಗೆ ಯೋಗ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಇದನ್ನು ಜನರಿಗೆ ಮನವರಿಕೆಮಾಡಿಕೊಡುವ ಪ್ರಯತ್ನ ನಮ್ಮದಾಗಬೇಕು ಎಂದು ತಿಳಿಸಿದರು.
ಶಿಬಿರದ ಸಂಚಾಲಕಿ ಅಕ್ಷತ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಪರಿಚಯ ಹಾಗೂ ವಸಂತ ಶಿಬಿರದ ಉದ್ದೇಶದ ಕುರಿತು ಮಾಹಿತಿಯನ್ನು ನೀಡಿದರು. ಶಿಬಿರಾರ್ಥಿಗಳಿಗೆ ಹಾಡಿನ ಮೂಲಕ ಕೆಲವೊಂದು ಚಲನವಲನಗಳನ್ನು ಮಾಡಿ ತೋರಿಸುವುದರ ಜತೆಗೆ ಶಿಬಿರಾರ್ಥಿಗಳಿಗೆ ಆಟ ಕಲಿಸಿಕೊಟ್ಟರು. ಸತ್ಯನಾರಾಯಣ ತಂತ್ರಿಯವರು "ಮಹಾ ವಿಷ್ಣು"ವಿನ ಅವತಾರದ ಬಗ್ಗೆ ಭೌದ್ಧಿಕ್ ನೀಡಿದರು. ಶಿಬಿರದ ಮುಖ್ಯ ಶಿಕ್ಷಕಿ ಸುಮಂಗಲಿ ಸ್ವಾಗತಿಸಿದರು. ವಿದ್ಯಾಗೌರಿ ಕಾರ್ಯಕ್ರಮದ ನಿರೂಪಿಸಿದರು. ಸಂಗೀತಾ ವಂದಿಸಿದರು. "ವಸಂತ ಶಿಬಿರ"ದಲ್ಲಿ 20 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಮಡಿದ್ದರು.
ಮಧೂರು ಮನ್ನಿಪಾಡಿಯಲ್ಲಿ "ವಸಂತ ಶಿಬಿರ "ಕಾರ್ಯಕ್ರಮಕ್ಕೆ ಚಾಲನೆ
0
ಏಪ್ರಿಲ್ 12, 2023