ನವದೆಹಲಿ: ನಗರದ ಮಾನದಂಡಕ್ಕೆ ಅರ್ಹವಾದ ಜನಸಂಖ್ಯೆ ಹೊಂದಿದ್ದರೂ ಗ್ರಾಮೀಣ ಹಣೆಪಟ್ಟಿ ಹೊಂದಿರುವ ಕಾರಣ ಭಾರತದ ಹೆಚ್ಚಿನ ಗ್ರಾಮಗಳು ಅಭಿವೃದ್ಧಿಯ ಅವಕಾಶಗಳಿಂದ ವಂಚಿತವಾಗುವ ಅಪಾಯವಿದೆ ಎಂದು ತಜ್ಞರು ಗುರುವಾರ ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ನಗರದ ಮಾನದಂಡಕ್ಕೆ ಅರ್ಹವಾದ ಜನಸಂಖ್ಯೆ ಹೊಂದಿದ್ದರೂ ಗ್ರಾಮೀಣ ಹಣೆಪಟ್ಟಿ ಹೊಂದಿರುವ ಕಾರಣ ಭಾರತದ ಹೆಚ್ಚಿನ ಗ್ರಾಮಗಳು ಅಭಿವೃದ್ಧಿಯ ಅವಕಾಶಗಳಿಂದ ವಂಚಿತವಾಗುವ ಅಪಾಯವಿದೆ ಎಂದು ತಜ್ಞರು ಗುರುವಾರ ಆತಂಕ ವ್ಯಕ್ತಪಡಿಸಿದ್ದಾರೆ.
2011ರ ಜನಗಣತಿಯ ಪ್ರಕಾರ 23,335 ಗ್ರಾಮಗಳ ಜನಸಂಖ್ಯೆಯು ಐದು ಸಾವಿರವನ್ನು ದಾಟಿದೆ. ಆದರೆ ಉಳಿದ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಇವುಗಳು ಇನ್ನೂ ಗ್ರಾಮಗಳಾಗಿಯೇ ಉಳಿದಿವೆ. ಈ ಕಾರಣಕ್ಕೆ ಇವುಗಳು ಅಭಿವೃದ್ಧಿಯಲ್ಲೂ ಹಿಂದೆ ಬಿದ್ದಿವೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್ಸ್ (ಐಐಎಚ್‌ಎಸ್) ನಿರ್ದೇಶಕ ಅರೋಮರ್ ರೆವಿ ಹೇಳಿದ್ದಾರೆ.
ಭಾರತದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ ಆ ಗ್ರಾಮಗಳನ್ನು ನಗರ ಎಂದು ಗುರುತಿಸಲಾಗುತ್ತಿದೆ. ಪ್ರತಿ ಚದರ ಕಿ.ಮೀ.ಗೆ ಕನಿಷ್ಠ 400 ಜನರಿರಬೇಕು ಮತ್ತು ಶೇ75ರಷ್ಟು ಜನರು ಕೃಷಿಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿರಬೇಕು.