ಕಾಸರಗೋಡು: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಹಿಂದೂ ಸಮುದಾಯದ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಅನಿವಾರ್ಯ ಎಂಬುದಾಗಿ ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಅಸ್ರ ಅವರು ನುಡಿದರು.
ಅವರು ಇತ್ತೀಚೆಗೆ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಸಂಕ್ರಾಂತಿ ಉತ್ಸವದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೈವಸ್ಥಾನದ ಆಡಳಿತ ಮೊಕ್ತೇಸರ್ ಎ. ರಮೇಶ ರೈ ಕೋಟೆಕುಂಜ ಅಧ್ಯಕ್ಷತೆ ವಹಿಸಿದ್ದರು. ಬೆದ್ರಡ್ಕ ದೈವಸ್ಥಾನದ ಸಮಗ್ರ ಅಭಿವೃದ್ಧಿ ಯೋಜನೆಗೆ ಆಡಳಿತ ಮಂಡಳಿ ರೂಪುರೇಷೆ ಸಿದ್ಧಪಡಿಸುತ್ತಿದೆ. ಇಲ್ಲಿನ ಧಾರ್ಮಿಕ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ಅಳವಡಿಸಲಾಗುವುದು, ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲಾಗುವುದು ಎಂದು ಮೊಕ್ತೇಸರ್ ಕೆ. ಆರ್. ಆಳ್ವ ಕೋಟೆಕುಂಜ ಕಂಬಾರು ತಿಳಿಸಿದರು.
ಮಾಜಿ ಆಡಳಿತ ಮೊಕ್ತೇಸರ್ ಎ. ಮಂಜುನಾಥ ರೈ ಕೋಟೆಕುಂಜ, ಮೊಕ್ತೇಸರರಾದ ಪಿ ರಾಮಪ್ರಸಾದ್ ಬಲ್ಲಾಳ್ ಚಿಪ್ಪಾರು, ಶೀನ ಶೆಟ್ಟಿ ಬಳ್ಳೂರು, ಆಡಳಿತ ಮಂಡಳಿ ಪ್ರತಿನಿಧಿ ಲಕ್ಷ್ಮಣ ನೋಂಡ ಕೋಟೆಕುಂಜ, ಡಾ. ಕರುಣಾಕರ ರೈ ಕೋಟೆಕುಂಜ ಉಪಸ್ಥಿತರಿದ್ದರು.
ಮೋಹನ್ ಕುಮಾರ್ ಶೆಟ್ಟಿ ಅಡ್ಕ ಸ್ವಾಗತಿಸಿದರು. ಲೋಕೇಶ್ ಎಂ ಬಿ ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರುಜಗದೀಶ್ ಆಚಾರ್ಯ ಕಂಬಾರು ವಂದಿಸಿದರು. ಈ ಸಂದರ್ಭ ಪದ್ಮಪ್ರಿಯ ಮಹಿಳಾ ಬಳಗ ಕಾಸರಗೋಡು ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಧಾರ್ಮಿಕಶ್ರದ್ಧಾ ಕೇಂದ್ರಗಳು ಸಮಾಜಮುಖಿ ಚಟುವಟಿಕೆಗೆ ಆದ್ಯತೆ ನೀಡಬೇಕು-ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಆಸ್ರ
0
ಏಪ್ರಿಲ್ 18, 2023
Tags