ಬದಿಯಡ್ಕ: ಸಾಂತ್ವನ ಸ್ಪರ್ಶ ವಾಟ್ಸಪ್ ಗ್ರೂಪ್ ಏತಡ್ಕ ಇವರ ನೇತೃತ್ವದಲ್ಲಿ ಸಂಗ್ರಹಿಸಿದ ಚಿಕಿತ್ಸಾ ಧನಸಹಾಯವನ್ನು ಬಾಬು ನೀರಡ್ಕ ಇವರಿಗೆ ಗ್ರಾಮಪಂಚಾಯಿತಿ ಸದಸ್ಯ ಕೃಷ್ಣ ಶರ್ಮಾ ಜಿ. ಹಸ್ತಾಂತರಿಸಿದರು. ಈ ಸಂದಭರ್Àದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಕರ್ಷಕ ಮೋರ್ಚಾ ಮಂಡಲ ಸದಸ್ಯ ವಿಷ್ಣು ಭಟ್ ಪಡಿಕ್ಕಲ್, ಬಿಜೆಪಿ ಕುಂಬ್ದಾಜೆ ಪಂಚಾಯಿತಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ, ಮಧುಪ್ರಕಾಶ್, ಲತಾ ಮೊದಲಾದವರು ಉಪಸ್ಥಿತರಿದ್ದರು.