ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ಧ್ವಜಾವರೋಹಣದೊಂದಿಗೆ ಸಂಪನ್ನಗೊಂಡಿತು. ಬೆಳಗ್ಗೆ ಕವಾಟೋದ್ಘಾನೆ, ತುಲಾಭಾರ ಸೇವೆ, ಸಂಜೆ ತಾಯಂಬಕ, ದೀಪಾರಾಧನೆ, ಉತ್ಸವ ಬಲಿ ನಡೆಯಿತು. ರಾತ್ರಿ ವಿಶೇಷ ವಿದ್ಯುತ್ ದೀಪಾಲಂಕೃತಗೊಂಡ ಕ್ಷೇತ್ರದ ಕೆರೆಯಲ್ಲಿ ಶ್ರೀದೇವರ ಅವಭೃತ ಸ್ನಾನ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು. ದೇವಸ್ಥಾದ ತಂತ್ರಿ ಬ್ರಹ್ಮಶ್ರೀ ಡಾ. ಶಿವಪ್ರಸಾದ ತಂತ್ರಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ, ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಧೂರು ದೇವಸ್ಥಾನ: ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ
0
ಏಪ್ರಿಲ್ 19, 2023