ಕಠ್ಮಂಡು (PTI): ನೇಪಾಳ ಕಾಂಗ್ರೆಸ್ ನಾಯಕ ನಾರಾಯಣ್ ಪ್ರಸಾದ್ ಸೌದ್ ಅವರು ದೇಶದ ನೂತನ ವಿದೇಶಾಂಗ ಸಚಿವರಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ಅವರು ಪ್ರಮಾಣವಚನ ಬೋಧಿಸಿದರು. ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಮೇ ತಿಂಗಳು ಭಾರತಕ್ಕೆ ಭೇಟಿ ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ ಈ ನೇಮಕಾತಿ ನಡೆದಿದೆ.