ಬದಿಯಡ್ಕ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದ ಆಡಳಿತ ಮೋಕ್ತೇಸರರಾಗಿ ಆಯ್ಕೆಯಾದ ಸಾಮಾಜಿಕ ಮುಂದಾಳು, ಸಾಹಿತ್ಯ ಪ್ರೋತ್ಸಾಹಕ ಪಡ್ಡಂಬೈಲ್ ಗುತ್ತು ತಾರನಾಥ ರೈ ಅವರನ್ನು ಬದಿಯಡ್ಜದ ತುಳುವೆರೆ ಆಯನೊ ಕೂಟದ ವತಿಯಿಂದ ಗೌರವಿಸಲಾಯಿತು. ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ ಗೌರವರ್ಪಣೆ ಸಲ್ಲಿಸಿದರು. ತುಳುವೆರೆ ಆಯನೋ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಕಾರ್ಯದರ್ಶಿ ಜಯ ಮಣಿಯಂಪಾರೆ, ಮಾಜಿ ಅಧ್ಯಕ್ಷ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಡಾ.ರಾಜೇಶ್ ಆಳ್ವ, ಸುಂದರ ಬಾರಡ್ಕ, ಶಂಕರ ಸ್ವಾಮಿಕೃಪಾ ಮೊದಲಾದವರು ಉಪಸ್ಥಿತರಿದ್ದರು.
ಕಾಟುಕುಕ್ಕೆ ಕ್ಷೇತ್ರ ಆಡಳಿತ ಮೋಕ್ತೇಸರ ತಾರನಾಥ ರೈಗೆ ತುಳುವೆರೆ ಆಯನೋದಿಂದ ಗೌರವಾರ್ಪಣೆ
0
ಏಪ್ರಿಲ್ 12, 2023
Tags