ಕಾಸರಗೋಡು: 2022 ರ ಡಿಸೆಂಬರ್ 31 ರವರೆಗೆ ಪಿಂಚಣಿ ಮಂಜೂರಾದ ರಾಜ್ಯ ಲಾಟರಿ ಏಜೆಂಟರು ಮತ್ತು ವರ್ತಕರ ಕಲ್ಯಾಣ ಮಂಡಳಿಯ ಕಲ್ಯಾಣ ನಿಧಿಯ ಸದಸ್ಯರು 2023 ರ ಏಪ್ರಿಲ್ 1 ರಿಂದ ಜೂನ್ 30ರ ನಡುವೆ ಅಕ್ಷಯಕೇಂದ್ರಗಳ ಮೂಲಕ ಬಯೋಮೆಟ್ರಿಕ್ ಜೋಡಣೆಗೆ ಒಳಗಾಗಬೇಕು.
ಪ್ರತಿ ವರ್ಷದ 1 ಜನವರಿಯಿಂದ 28 ಯಾ 29 ಫೆಬ್ರವರಿವರೆಗೆ, 2024 ರಿಂದ 31 ಡಿಸೆಂಬರ್ ವರೆಗೆ ತಕ್ಷಣವೇ ಹಿಂದಿನ ವರ್ಷದ ಪಿಂಚಣಿ ಮಂಜೂರು ಮಾಡಿದ ಕಲ್ಯಾಣ ನಿಧಿಯ ಸದಸ್ಯರು ಅಕ್ಷಯ ಕೇಂದ್ರಗಳ ಮೂಲಕ ಬಯೋಮೆಟ್ರಿಕ್ ಮಸ್ಟರಿಂಗ್ ನಡೆಸಬೇಕಾಗಿದೆ. ಅಕ್ಷಯ ಕೇಂದ್ರವನ್ನು ತಲುಪಲು ಸಾಧ್ಯವಾಗದ ದೈಹಿಕ ಯಾ ಮಾನಸಿಕ ವಿಕಲಚೇತನರು, ಹಾಸಿಗೆ ಹಿಡಿದವರು ಮತ್ತು ವೃದ್ಧರು ಅಕ್ಷಯ ಕೇಂದ್ರಕ್ಕೆ ತಿಳಿಸಬೇಕು ಮತ್ತು ಅದರಂತೆ ಅಕ್ಷಯ ಕೇಂದ್ರದ ಪ್ರತಿನಿಧಿಗಳು ಫಲಾನುಭವಿಗಳ ಮನೆಗೆ ಭೇಟಿ ನೀಡಿ ¸ಮಸ್ಟರಿಂಗ್ ನಡೆಸುವರು. ಪಿಂಚಣಿ ಪಡೆಯುತ್ತಿದ್ದು, ಕಲ್ಯಾಣ ಮಂಡಳಿಗಳಲ್ಲಿ ಬಯೋಮೆಟ್ರಿಕ್ ಜೀವಿತ ಪ್ರಮಾಣ ಪತ್ರ ಸಂಗ್ರಹಿಸಲು ವಿಫಲರಾದ ಕಲ್ಯಾಣ ಮಂಡಳಿ ಸದಸ್ಯರು ನಿಗದಿತ ಅವಧಿಯೊಳಗೆ ಮಸ್ಟರಿಂಗ್ ಪೂರ್ಣಗೊಳಿಸಿ ನೀಡಿದಲ್ಲಿ ಮಾತ್ರ ನಿಗದಿತ ಅವಧಿಯೊಳಗೆ ಪಿಂಚಣಿ ಜಮಾ ಮಾಡಲಾಗುತ್ತದೆ. ನಿಗದಿತ ಅವಧಿಯೊಳಗೆ ಮಸ್ಟರಿಂಗ್ ಪೂರ್ಣಗೊಳಿಸದವರು ಪ್ರತಿ ತಿಂಗಳು 1ರಿಂದ 20ರವರೆಗೆ ಮಸ್ಟರಿಂಗ್ ನಡೆಸಬಹುದಾಗಿದೆ. ಆದರೆ ಮಸ್ಟರಿಂಗ್ ತಿಂಗಳ ಪಿಂಚಣಿ ಮಾತ್ರ ಸಿಗುತ್ತದೆ. ಮಸ್ಟರಿಂಗ್ ನಡೆಸದ ಕಾಲಾವಧಿಯ ಪಿಂಚಣಿ ಪಡೆಯಲು ಯಾವುದೇ ಅರ್ಹತೆ ಇರುವುದಿಲ್ಲ ಎಂದು ಕಾಸರಗೋಡು ಜಿಲ್ಲಾ ಲಾಟರಿ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಲಾಟರಿ ಏಜೆಂಟರು, ವರ್ತಕರ ಕಲ್ಯಾಣ ಮಂಡಳಿ-ಮಸ್ಟರಿಂಗ್ ನಡೆಸಲು ಸೂಚನೆ
0
ಏಪ್ರಿಲ್ 10, 2023