HEALTH TIPS

ಡಾನ್‌ ಆಗಲು ಹವಣಿಸಿದ್ದ ಆರೋಪಿಗಳು; ಉತ್ತರ ಪ್ರದೇಶದಾದ್ಯಂತ ಕಟ್ಟೆಚ್ಚರ

 

            ಲಖನೌ: ಪ್ರಯಾಗ್‌ ರಾಜ್‌ನಲ್ಲಿ ಪಾತಕಿ ಅತೀಕ್‌ ಅಹ್ಮದ್‌ ಮತ್ತು ಅಶ್ರಫ್‌ ಅಹ್ಮದ್‌ ಅವರನ್ನು ಕೊಂದು ಭೂಗತ ಜಗತ್ತಿನಲ್ಲಿ ಬಹು ಬೇಗ ಪ್ರಖ್ಯಾತಿಗಳಿಸಲು ಆರೋಪಿಗಳು ಸಂಚು ರೂಪಿಸಿದ್ದ ಸಂಗತಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

                 'ಎಷ್ಟು ದಿನ ಗಳವರೆಗೆ ನಾವು ಸಣ್ಣಪುಟ್ಟ ಕೃತ್ಯ ಗಳನ್ನೇ ಎಸಗಬೇಕು.

ದೊಡ್ಡಮಟ್ಟದ ಕೃತ್ಯ ಎಸಗಿ ಭೂಗತ ಜಗತ್ತಿನ ದೊರೆಗಳಾಗಬೇಕೆಂದು ನಿರ್ಧರಿ ಸಿದ್ದೆವು' ಎಂದು ಆರೋಪಿಗಳು ಹೇಳಿದ್ದಾರೆ.

               ಬಾಂಡಾ ಪ್ರದೇಶದ ಲವ್ಲೇಶ್‌ ತಿವಾರಿ ಕುಟುಂಬದವರು ಸಭ್ಯಸ್ಥರು. ಮಾದಕ ವ್ಯಸನಿಯಾದ ಆತನ ವರ್ತನೆಯನ್ನು ಅವರು ಸಹಿಸುತ್ತಿರಲಿಲ್ಲ. ಇದರಿಂದ ಕುಟುಂಬದಿಂದ ಆತ ದೂರ ಉಳಿದಿದ್ದ. ಆತನ ಇಬ್ಬರು ಸಹೋದರರು ಪೌರೋಹಿತ್ಯ ವೃತ್ತಿ ಮಾಡುತ್ತಿದ್ದು ಮತ್ತೊಬ್ಬ ಸಹೋದರ ಓದುತ್ತಿದ್ದಾನೆ. ಅಪರಾಧ ಎಸಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿರುವ ಹಿನ್ನೆಲೆ ತಿವಾರಿಗೆ ಇದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

              ಹಮೀರ್‌ಪುರದ ಸನ್ನಿ ತನ್ನ ಪ್ರದೇಶದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದ. ಹಮೀರ್‌ ಪುರದ ಜೈಲಿನಲ್ಲಿ ಗ್ಯಾಂಗ್‌ಸ್ಟರ್‌ ಸುಂದೆರ್‌ ಭಾಟಿಯನ್ನು ಭೇಟಿಯಾಗಿದ್ದ. ಆತನಿಂದಲೇ ಪಿಸ್ತೂಲ್ ಪಡೆದಿದ್ದಾನೆ. ಆತನ ಮೇಲೆ 15 ಕ್ರಿಮಿನಲ್‌ ಪ್ರಕರಣಗಳಿದ್ದು, ಆತ ವೃತ್ತಿಪರ ಕ್ರಿಮಿನಲ್‌ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

               ಕೃತ್ಯದಲ್ಲಿ ಅರುಣ್‌ ಮೌರ್ಯ ಹೆಸರು ಕೇಳಿಬಂದಿರುವ ಬಗ್ಗೆ ಕಾಸ್‌ಗಾಂಜಿ ಪ್ರದೇಶದ ಜನರು ದಿಗ್ಬ್ರಮೆಗೊಂಡಿದ್ದಾರೆ. ಆತನ ತಂದೆ, ತಾಯಿ ಮೃತಪಟ್ಟಿದ್ದಾರೆ. ಆತನ ಇಬ್ಬರು ಸಹೋದರರು ದೆಹಲಿಯಲ್ಲಿದ್ದು, ಹಳೆಯ ಸರಕು ಸಾಮಗ್ರಿ ಮಾರಾಟದ ವ್ಯವಹಾರದಲ್ಲಿ ತೊಡಗಿದ್ದಾರೆ. ದಶಕದ ಹಿಂದೆಯೇ ಆತನ ಊರು ತೊರೆದಿದ್ದಾನೆ.

           ಅಂತ್ಯಕ್ರಿಯೆ: ಮರಣೋತ್ತರ ಪರೀಕ್ಷೆಯ ಬಳಿಕ ಅತೀಕ್‌ ಮತ್ತು ಅಶ್ರಫ್‌ ಅವರ ಮೃತದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

                ಈ ಮಧ್ಯೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಯಾಗರಾಜ್‌ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

                      ಯು‍ಪಿಎ ಉಳಿವಿಗೆ ನೆರವಾಗಿದ್ದ ಅತೀಕ್

           2008ರಲ್ಲಿ ಅಮೆರಿಕದೊಂದಿಗಿನ ಭಾರತದ ನಾಗರಿಕ ಪರಮಾಣು ಒಪ್ಪಂದದ ವೇಳೆ ಸಂಸತ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಡಾ.ಮನಮೋಹನ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರವನ್ನು ಉಳಿಸುವಲ್ಲಿ ಸಂಸದನಾಗಿದ್ದ ಅತೀಕ್‌ ಅಹ್ಮದ್‌ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದೆ.

                 ಲೇಖಕ ರಾಜೇಶ್‌ ಸಿಂಗ್‌ ಬರೆದಿರುವ 'ಬಾಹುಬಲೀಸ್ ಆಫ್‌ ಇಂಡಿಯನ್‌ ಪಾಲಿಟಿಕ್ಸ್‌: ಫ್ರಮ್‌ ಬುಲೆಟ್‌ ಟು ಬ್ಯಾಲೆಟ್‌' ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಆ ವೇಳೆ ಅತೀಕ್‌ ಉತ್ತರ ಪ್ರದೇಶದ ಫುಲ್ಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದ.

            ಆ ವೇಳೆ ಸರ್ಕಾರದ ನಡೆ ಖಂಡಿಸಿ ಎಡಪಕ್ಷಗಳು ಬಾಹ್ಯ ಬೆಂಬಲವನ್ನು ಹಿಂಪಡೆದವು. 228 ಸದಸ್ಯರನ್ನು ಹೊಂದಿದ್ದ ಯುಪಿಎ ಸರ್ಕಾರಕ್ಕೆ, 44 ಸಂಸದರ ಬೆಂಬಲ ಬೇಕಿತ್ತು. ಆ ವೇಳೆ ಸಮಾಜವಾದಿ ಪಕ್ಷ, ಆರ್‌ಎಲ್‌ಡಿ, ಜೆಡಿಎಸ್‌ ಪಕ್ಷಗಳು ಯುಪಿಎಗೆ ಬೆಂಬಲ ಘೋಷಿಸಿದವು. ಹಾಗಾಗಿ, ಅವಿಶ್ವಾಸ ನಿರ್ಣಯ ಮಂಡನೆ ಸಭೆಯಲ್ಲಿ ಅತೀಕ್‌, ಯುಪಿಎ ಪರ ಮತ ಚಲಾಯಿಸಿದ್ದ ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.

                    ಕಮಲ್‌ನಾಥ್‌ಗೆ ಬಿಜೆಪಿ ತಿರುಗೇಟು

           'ಉತ್ತರ ಪ್ರದೇಶದಲ್ಲಿ ಯಾವ ಮಾದರಿಯ ರಾಜಕೀಯ ಆಡಳಿತ ಇದೆ ಎಂಬುದನ್ನು ಜನರು ಮನಗಾಣಬೇಕಿದೆ. ಒಂದು ದಿನ ಪೊಲೀಸರು ಎನ್‌ಕೌಂಟರ್‌ ನಡೆಸಿದರೆ ಮಾರನೇ ದಿನ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಾರೆ. ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಇಂತಹ ಆಡಳಿತ ಇರುವ ಬಗ್ಗೆ ಸಮಾಜ ಚಿಂತನೆ ನಡೆಸಬೇಕಿದೆ' ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಟೀಕಿಸಿದ್ದಾರೆ.

'ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿಯೇ ಈ ಪ್ರಕರಣದ ತನಿಖೆ ನಡೆಯಬೇಕು' ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಸಂಸದ ಹಾಗೂ ಬಿಜೆಪಿ ವಕ್ತಾರ ನರೇಂದ್ರ ಸಲುಜಾ, 'ಪಾತಕಿ ಅತೀಕ್‌ ಮೇಲೆ ಕಮಲ್‌ನಾಥ್‌ಗೆ ವಿಶೇಷ ಪ್ರೀತಿ ಇದೆ' ಎಂದು ವ್ಯಂಗ್ಯವಾಡಿದ್ದಾರೆ.

               'ಅತೀಕ್‌ ಮೇಲೆ ನೂರಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಹಲವು ಅಮಾಯಕರನ್ನು ಕೊಂದು ಅವರ ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾನೆ. ಸುಪ್ರೀಂ ಕೋರ್ಟ್‌ ಸುಪರ್ದಿಯಲ್ಲಿ ಪ್ರಕರಣದ ತನಿಖೆಗೆ ಒತ್ತಾಯಿಸುವುದು ನಾಚಿಕೆಗೇಡಿನ ಸಂಗತಿ. ರಾಜಕೀಯದಲ್ಲಿ ಮಾಫಿಯಾ ಇರಬೇಕೆಂಬ ಅವರ ಧೋರಣೆ ಸರಿಯಲ್ಲ' ಎಂದಿದ್ದಾರೆ.

                        ಟರ್ಕಿ ನಿರ್ಮಿತ ಪಿಸ್ತೂಲ್‌ ಬಳಕೆ

            ಮೂವರು ಆರೋಪಿಗಳು ವಿದ್ಯುನ್ಮಾನ ಮಾಧ್ಯಮ ಪತ್ರಕರ್ತರ ಸೋಗಿನಲ್ಲಿ ಸ್ಥಳಕ್ಕೆ ಬಂದಿದ್ದರು. ಅವರ ಬಳಿ ವಿಡಿಯೊ ಕ್ಯಾಮೆರಾಗಳು, ಮೈಕ್‌ ಹಾಗೂ ಪತ್ರಕರ್ತರ ನಕಲಿ ಗುರುತಿನ ಚೀಟಿಗಳು ಇದ್ದವು ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

            'ಟರ್ಕಿಯಲ್ಲಿ ನಿರ್ಮಿತ ಪಿಸ್ತೂಲ್‌ಗಳಿಂದ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮೂರು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ' ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಡಿ.ಜಿ. ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಷಗಾಂಜಿ ಪ್ರದೇಶದಲ್ಲಿರುವ ಮೋತಿಲಾಲ್‌ ನೆಹರೂ ಆಸ್ಪತ್ರೆಗೆ ಅತೀಕ್‌ ಮತ್ತು ಅಶ್ರಫ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಪತ್ರಕರ್ತರ ಗುಂಪಿನಲ್ಲಿದ್ದ ಆರೋಪಿಗಳು ತಲೆ ಹಾಗೂ ದೇಹದ ಇತರೇ ಭಾಗಗಳಿಗೆ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

          ಘಟನೆ ಬಗ್ಗೆ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರವಿಂದ ಕುಮಾರ್ ತ್ರಿಪಾಠಿ, ನಿವೃತ್ತ ಡಿಜಿಪಿ ಸುಬೇಶ್‌ ಕುಮಾರ್‌ ಸಿಂಗ್‌ ಹಾಗೂ ಜಿಲ್ಲಾ ನಿವೃತ್ತ ನ್ಯಾಯಾಧೀಶ ಬ್ರೀಜೇಶ್‌ ಕುಮಾರ್‌ ಸಿಂಗ್‌ ಸೋನಿ ನೇತೃತ್ವದಡಿ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ. ಎರಡು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

                             ಕಮಲ್‌ನಾಥ್‌ಗೆ ಬಿಜೆಪಿ ತಿರುಗೇಟು

            'ಉತ್ತರ ಪ್ರದೇಶದಲ್ಲಿ ಯಾವ ಮಾದರಿಯ ರಾಜಕೀಯ ಆಡಳಿತ ಇದೆ ಎಂಬುದನ್ನು ಜನರು ಮನಗಾಣಬೇಕಿದೆ. ಒಂದು ದಿನ ಪೊಲೀಸರು ಎನ್‌ಕೌಂಟರ್‌ ನಡೆಸಿದರೆ ಮಾರನೇ ದಿನ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುತ್ತಾರೆ. ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಇಂತಹ ಆಡಳಿತ ಇರುವ ಬಗ್ಗೆ ಸಮಾಜ ಚಿಂತನೆ ನಡೆಸಬೇಕಿದೆ' ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಟೀಕಿಸಿದ್ದಾರೆ.

              'ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿಯೇ ಈ ಪ್ರಕರಣದ ತನಿಖೆ ನಡೆಯಬೇಕು' ಎಂದು ಆಗ್ರಹಿಸಿದ್ದಾರೆ.

            ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ವಕ್ತಾರ ನರೇಂದ್ರ ಸಲುಜಾ, 'ಪಾತಕಿ ಅತೀಕ್‌ ಮೇಲೆ ಕಮಲ್‌ನಾಥ್‌ಗೆ ವಿಶೇಷ ಪ್ರೀತಿ ಇದೆ' ಎಂದು ವ್ಯಂಗ್ಯವಾಡಿದ್ದಾರೆ.

              'ಅತೀಕ್‌ ಮೇಲೆ ನೂರಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಹಲವು ಅಮಾಯಕರನ್ನು ಕೊಂದು ಅವರ ಕುಟುಂಬಗಳನ್ನು ಬೀದಿಪಾಲು ಮಾಡಿದ್ದಾನೆ. ಸುಪ್ರೀಂ ಕೋರ್ಟ್‌ ಸುಪರ್ದಿಯಲ್ಲಿ ಪ್ರಕರಣದ ತನಿಖೆಗೆ ಒತ್ತಾಯಿಸುವುದು ನಾಚಿಕೆಗೇಡಿನ ಸಂಗತಿ. ರಾಜಕೀಯದಲ್ಲಿ ಮಾಫಿಯಾ ಇರಬೇಕೆಂಬ ಅವರ ಧೋರಣೆ ಸರಿಯಲ್ಲ' ಎಂದು ಟೀಕಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries