ಕಾಸರಗೋಡು: ರೈಲು ಡಿಕ್ಕಿಹೊಡೆದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಗುರುತು ಪತ್ತೆಗೆ ಪೆÇೀಲೀಸರು ಹುಡುಕಾಟ ನಡೆಸುತ್ತಿದ್ದು, ಈ ವ್ಯಕ್ತಿ ಕರ್ನಾಟಕ ನಿವಾಸಿಯೆಂದು ಶಂಕಿಸಲಾಗಿದೆ. ಮೇಲ್ಪರಂಬು ಪೋಲೀಸ್ ಠಾಣಾ ವ್ಯಾಪ್ತಿಯ ಕಳನಾಡ್ ರೈಲ್ವೇ ನಿಲ್ದಾಣ ಸಮೀಪದಲ್ಲಿ ಮೊನ್ನೆ ಬೆಳಿಗ್ಗೆ ರೈಲು ಡಿಕ್ಕಿಹೊಡೆದು ಜಜ್ಜಿ ಹೋದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸುಮಾರು 60 ವರ್ಷ ಪ್ರಾಯದ ವ್ಯಕ್ತಿ ಪ್ಯಾಂಟ್, ಶರ್ಟ್ ಧರಿಸಿದ್ದರು. ಮೃತದೇಹದ ಬಳಿಯಲ್ಲಿ ಕಾರ್ಕಳದ ಆಸ್ಪತ್ರೆಯೊಂದರ ಚೀಟಿ ಪತ್ತೆಯಾಗಿದುದರಿಂದ ಕರ್ನಾಟಕ ನಿವಾಸಿಯೆಂದು ಶಂಕಿಸಲಾಗಿದೆ. ಎಸ್.ಐ ವಿಜಯನ್ ನೇತೃತ್ವದಲ್ಲಿ ತನಿಖೆ ನಡೇಸುತ್ತಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಶ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಈ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಸಮೀಪದ ಪೆÇೀಲೀಸ್ ಠಾಣೆ ಅಥವಾ ಈ ಪೆÇೀನ್ ನಂಬ್ರಕ್ಕೆ ಕರೆ ಮಾಡಲು ಮೇಲ್ಪರಂಬ ಪೆÇೀಲೀಸರು ವಿನಂತಿಸಿದ್ದಾರೆ.
ಕಳನಾಡ್ ರೈಲು ಡಿಕ್ಕಿಹೊಡೆದು ಮೃತಪಟ್ಟ ವ್ಯಕ್ತಿ ಕರ್ನಾಟಕ ನಿವಾಸಿಯೆಂದು ಶಂಕೆ: ಮೇಲ್ಪರಂಬ ಪೋಲೀಸರಿಂದ ತನಿಖೆ
0
ಏಪ್ರಿಲ್ 13, 2023