ನವದೆಹಲಿ: 2020 ರಲ್ಲಿ ಗಾಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಅವರನ್ನು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ರೇಖಾ ಸಿಂಗ್ ಅವರನ್ನು ಪೂರ್ವ ಲಡಾಖ್ನ ಗಡಿ ನಿಯಂತ್ರಣ ರೇಖೆ(ಎಲ್ಎಸಿ) ಉದ್ದಕ್ಕೂ ಮುಂಚೂಣಿ ಬೇಸ್ ನಲ್ಲಿ ನಿಯೋಜಿಸಲಾಗಿದ್ದು, ಚೆನ್ನೈ ಮೂಲದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ(ಒಟಿಎ) ಒಂದು ವರ್ಷದ ತರಬೇತಿಯನ್ನು ಶನಿವಾರ ಪೂರ್ಣಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಬಿಹಾರ ರೆಜಿಮೆಂಟ್ನ 16ನೇ ಬೆಟಾಲಿಯನ್ಗೆ ಸೇರಿದ್ದ ನಾಯಕ್ ದೀಪಕ್ ಸಿಂಗ್ ಅವರಿಗೆ ಮರಣೋತ್ತರವಾಗಿ 2021ರಲ್ಲಿ ವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಗಾಲ್ವಾನ್ ಘರ್ಷಣೆ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಹೇಳಿಕೆ: ನಟ ಅಕ್ಷಯ್ ಕುಮಾರ್ ಖಂಡನೆ 'ದಿವಂಗತ ನಾಯಕ್(ಶುಶ್ರೂಷಾ ಸಹಾಯಕ) ದೀಪಕ್ ಸಿಂಗ್ ಅವರ ಪತ್ನಿ ಮಹಿಳಾ ಕೆಡೆಟ್ ರೇಖಾ ಸಿಂಗ್ ಅವರು ಚೆನ್ನೈನಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ್ದು, ಭಾರತೀಯ ಸೇನೆಗೆ ನೇಮಕಗೊಂಡಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.