ಕೊಚ್ಚಿ: ಚಲಿಸುವ ಆಟೋದಿಂದ ಜಿಗಿದು ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗರ್ಭಿಣಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕಳ್ಳಂಬಲಂನಲ್ಲಿ ನಡೆದಿದೆ. ಸುಬಿನಾ (22) ಮೃತಪಟ್ಟ ಮಹಿಳೆ.
ಕೊಚ್ಚಿ: ಚಲಿಸುವ ಆಟೋದಿಂದ ಜಿಗಿದು ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗರ್ಭಿಣಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಕೇರಳದ ಕಳ್ಳಂಬಲಂನಲ್ಲಿ ನಡೆದಿದೆ. ಸುಬಿನಾ (22) ಮೃತಪಟ್ಟ ಮಹಿಳೆ.
ಆಟೋ ಒಳಗೆ ಸುಬಿನಾ ಮತ್ತು ಆಕೆಯ ಗಂಡನ ನಡುವೆ ಯಾವುದೇ ವಿಚಾರಕ್ಕೆ ವಾಗ್ವಾದ ಶುರುವಾಗಿದೆ. ಮಾತಿಗೆ ಮಾತಿಗೆ ಬೆಳೆದು ತಾಳ್ಮೆ ಕಳೆದುಕೊಂಡು ಸುಬಿನಾ, ಕೋಪದಿಂದ ಆಟೋದಿಂದ ಹೊರಗೆ ಜಿಗಿದ್ದಾಳೆ. ಈ ವೇಳೆ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ತಲೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದಳು.
ತಕ್ಷಣ ಸುಬಿನಾಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.