ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈಸ್ಟರ್ ಹಬ್ಬದ ಶುಭಾಶಯಗಳೊಂದಿಗೆ ಕ್ರೈಸ್ತ ಧರ್ಮೀಯರ ಮನೆಗಳಿಗೆ ಭೇಟಿನೀಡುವ ಕಾರ್ಯಕ್ರಮ ಹಮ್ಮಿಕೊಂಡರು.
ಕ್ರೈಸ್ತ ಸಮುದಾಯ ಬಿಜೆಪಿಗೆ ಸನಿಹವಾಗುತ್ತಿದೆ ಎಂಬ ಊಹಾಪೆÇೀಹದ ನಡುವೆಯೇ ಪಕ್ಷದ ವತಿಯಿಂದ ಈ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರಾಯ್ ಜೋಸೆಫ್, ಬಿಜೆಪಿ ವೆಳ್ಳರಿಕುಂಡ್ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಜಿತ್, ಕೋಶಾಧಿಖಾರಿ ಕೃಷ್ಣಕುಮಾರ್ ಕೊಟ್ಟೋಡಿ, ಜಿಲ್ಲಾ ಸಮಿತಿ ಸದಸ್ಯ ಪ್ರಮೋದ್ ವರ್ಣಂ, ಕೆ.ಕೆ.ವೇಣುಗೋಪಾಲ್ ಗೃಹಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಯ್ ಜೋಸೆಫ್, ಜಾನ್ ಮಾಸ್ಟರ್ ಪರಪ್ಪ, ವಿನೀಶ್ ಕನಕ ಪಳ್ಳಿ, ಥಾಮಸ್ ಚುಳ್ಳಿಕಾರ, ಥಾಮಸ್ ಸೆಬಾಸ್ಟಿಯನ್ ಪನತ್ತಡಿ ಸೇರಿದಂತೆ ಹಲವರ ಮನೆಗಳಿಗೆ ಭೇಟಿ ನೀಡಲಾಯಿತು.
ಈಸ್ಟರ್ ಹಬ್ಬಕ್ಕೆ ಕ್ರೈಸ್ತರ ಮನೆಗಳಿಗೆ ಭೇಟಿ ನೀಡಿ ಶುಭಾಶಯ ಕೋರಿದ ಬಿಜೆಪಿ ಮುಖಂಡರು
0
ಏಪ್ರಿಲ್ 10, 2023
Tags