ಮಂಜೇಶ್ವರ: ಮನೆ ಮನೆಗಳಿಂದ ಪ್ಲಾಸ್ಟಿಕ್ ಹಾಗೂ ಒಣ ತ್ಯಾಜ್ಯ ಸಂಗ್ರಹ ಮಾಡುವ ಹಸಿರು ಕ್ರಿಯಾಸೇನಾನಿಗಳ ಕಾರ್ಯ ಶ್ಲಾಘನೀಯ. ಪಂಚಾಯತಿ ಸ್ವಚ್ಛತೆಗೆ ಜನರ ಸಹಕಾರ ಅಗತ್ಯ. ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಿ ಕಠಿಣ ಕ್ರಮ ಜರಗಿಸಲು ತೀರ್ಮಾನಿಸಲಾಗಿದೆ.
ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವವರ ಮಾಹಿತಿ ನೀಡುವವರು ಮುಂದೆ ಬರಬೇಕು, ಕೆಲವು ಕಡೆ ಸಿಸಿ ಕೆಮರಾ ಸ್ಥಾಪಿಸಲಾಗುವುದು ಎಂದು ಮಂಜೇಶ್ವರ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನ ಮೊಂತೆರೊ ಹೇಳಿದರು. ಪಂಚಾಯತಿ ನಿಯಮ ಪಾಲಿಸದರ ಮೇಲೆ ಕಠಿಣ ಕಾನೂನು ಪಾಲನೆ ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಪಂಚಾಯತಿ ಹಸಿರು ಕ್ರಿಯಾಸೇನೆ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಜನಪ್ರತಿನಿಧಿಗಳಾದ ಸುಪ್ರಿಯಾ ಶೆಣೈ, ಲಕ್ಷ್ಮಣ್ ಬಿ.ಎಂ, ವಿನಯ ಭಾಸ್ಕರ್, ಜಯಂತಿ, ಆದರ್ಶ್ ಬಿ.ಎಂ, ರಾಜೇಶ್ ಮಜಲ್ ಉಪಸ್ಥಿತರಿದ್ದರು.
ಮಂಜೇಶ್ವರ ಶುಚಿತ್ವ ಹಸಿರು ಕ್ರಿಯಾಸೇನೆ ಮಾಸಿಕ ಸಭೆ
0
ಏಪ್ರಿಲ್ 01, 2023