HEALTH TIPS

'ಐ ಡ್ರಾಪ್ಸ್'ನಲ್ಲಿ ಕಲಬೆರಕೆ ಕಂಡುಬಂದಿಲ್ಲ: ಮಾಧ್ಯಮಗಳ ವರದಿ

 

                    ನವದೆಹಲಿ: 'ಅಮೆರಿಕದಲ್ಲಿ ಸಂಭವಿಸಿದ್ದ ಮೂವರ ಸಾವು ಹಾಗೂ ಕೆಲ ರೋಗಿಗಳಲ್ಲಿ ದೃಷ್ಟಿ ಹಾನಿಗೆ ನಂಟಿದೆ ಎಂಬ ಆರೋಪ ಎದುರಿಸುತ್ತಿದ್ದ ಭಾರತದ ಕಂಪನಿ ಉತ್ಪಾದಿಸಿರುವ ಕಣ್ಣಿನ ಔಷಧಿಯ (ಐ ಡ್ರಾಪ್) ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಮಾದರಿಗಳಲ್ಲಿ ಯಾವುದೇ ಕಲ್ಮಶ ಅಥವಾ ಕಲಬೆರಕೆ ಕಂಡುಬಂದಿಲ್ಲ' ಎಂದು ಎನ್‌ಡಿಟಿವಿ ಮಂಗಳವಾರ ವರದಿ ಮಾಡಿದೆ.

              'ಆರೋಗ್ಯ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ' ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ತಿಳಿಸಿದೆ.

                      ಚೆನ್ನೈ ಮೂಲದ ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್‌ ಈ 'ಐ ಡ್ರಾಪ್‌'ಅನ್ನು ಉತ್ಪಾದಿಸಿದೆ.

                    'ಐ ಡ್ರಾಪ್ಸ್'ನ ಮಾದರಿಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಎಂಬುದು ಭಾರತದಲ್ಲಿ ನಡೆಸಿರುವ ಪರೀಕ್ಷೆಗಳು ದೃಢಪಡಿಸಿವೆ' ಎಂದು ಎನ್‌ಡಿಟಿವಿ ವರದಿಯಲ್ಲಿ ಹೇಳಲಾಗಿದೆ. ಆದರೆ, ಈ ಕುರಿತು ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್‌ ಮತ್ತು ಆರೋಗ್ಯ ಸಚಿವಾಲಯದ ವಕ್ತಾರರು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದೂ ರಾಯಿಟರ್ಸ್ ಹೇಳಿದೆ.

                     ಈ 'ಐ ಡ್ರಾಪ್‌' ಬಳಕೆ ಕುರಿತು ಕೆಲ ತಿಂಗಳ ಹಿಂದೆ ಅಮೆರಿಕದ ಆರೋಗ್ಯ ನಿಯಂತ್ರಕ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಔಷಧಿ ನಿರೋಧಕ ಬ್ಯಾಕ್ಟೀರಿಯಾದಿಂದ ಈ 'ಐ ಡ್ರಾಪ್ಸ್' ಕಲುಷಿತಗೊಂಡಿದೆ ಎಂದೂ ಆರೋಪಿಸಿದ್ದವು.

                 'ಕಂಪನಿಯು (ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್‌) ಗುಣಮಟ್ಟದ ಉತ್ಪಾದನೆಗೆ ಸಂಬಂಧಿಸಿದ ವೃತ್ತಿಪರತೆಯನ್ನು ಪಾಲನೆ ಮಾಡಿಲ್ಲ' ಎಂದೂ ಆರೋಪಿಸಲಾಗಿತ್ತು. ಈ ಆರೋಪಗಳ ಬೆನ್ನಲ್ಲೇ, ಕಂಪನಿಯು ಮಾರುಕಟ್ಟೆಗಳಿಂದ ತನ್ನ ಉತ್ಪನ್ನವನ್ನು (ಐ ಡ್ರಾಪ್ಸ್) ಹಿಂದಕ್ಕೆ ಪಡೆದಿತ್ತು.

               'ಈ ಐ ಡ್ರಾಪ್ಸ್‌ ಬಳಸಿದ್ದ ರೋಗಿಗಳ ಪೈಕಿ, 16 ರಾಜ್ಯಗಳಲ್ಲಿನ 68 ರೋಗಿಗಳಲ್ಲಿ ಔಷಧ ನಿರೋಧಕ ಬ್ಯಾಕ್ಟೀರಿಯಾದ ಅಪರೂಪದ ತಳಿ ಇರುವುದು ಕಂಡು ಬಂದಿತ್ತು' ಎಂದು ಅಮೆರಿಕದ 'ರೋಗ ನಿಯಂತ್ರಣ ಕೇಂದ್ರ' (ಸಿಡಿಸಿ) ಮಾರ್ಚ್‌ 14ರಂದು ಹೇಳಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries