ಮುಂಬೈ: ಮಹಾರಾಷ್ಟ್ರ ರಾಜ್ಯ ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ಕೃಷಿ ವಿಷಯ ಸೇರಿಸುವ ಯೋಜನೆಯನ್ನು ಹೊರತಂದಿದೆ.
ಈ ಯೋಜನೆ ಪ್ರಕಾರ ಶಾಲೆಯ ಎಲ್ಲಾ ತರಗತಿಗಳಲ್ಲಿ ಕೃಷಿ ವಿಷಯವನ್ನು ಬೋಧನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
1ರಿಂದ 5ನೇ ತರಗತಿ, 6 ರಿಂದ 8ನೇ ತರಗತಿ ಹಾಗೂ 9 ರಿಂದ 10ನೇ ತರಗತಿ, ಹೀಗೆ ಮೂರು ಹಂತದಲ್ಲಿ ಕೃಷಿ ವಿಷಯಗಳನ್ನು ಅಳವಡಿಸಲಾಗುವುದು.
ಪಠ್ಯಕ್ರಮದಲ್ಲಿ ಕೃಷಿಯ ಪ್ರಾಮುಖ್ಯತೆ, ಉದ್ಯೋಗಾವಕಾಶ, ಕೃಷಿಯ ಬಗ್ಗೆ ಆಳವಾದ ಮಾಹಿತಿ ಸೇರಿದಂತೆ ವಿವಿಧ ಅಂಶಗಳನ್ನು ಸೇರಿಸಲಾಗುವುದು.
ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು ಹಾಗೂ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಪಕರನ್ನೊಳಗೊಂಡ ಸಮಿತಿ ಪಠ್ಯಕ್ರಮ ಸಿದ್ಧಪಡಿಸಿಲಿದೆ. ಇದಕ್ಕಾ ತಜ್ಞರ ಸಮಿತಿ ರಚನೆ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲೇ ಶಾಲಾ ಪಠ್ಯಕ್ರಮದಲ್ಲಿ ಕೃಷಿ ವಿಷಯ ಅಳವಡಿಸಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.