ಆಲಪ್ಪುಳ: ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರಿಂದ ಬರ್ಬರವಾಗಿ ಹತ್ಯೆಯಾದ ರಂಜೀತ್ ಶ್ರೀನಿವಾಸನ್ ಅವರ ಪತ್ನಿ ಹಾಗೂ ವಕೀಲೆ ಲಿಶಾ ರಂಜೀತ್ ಅವರನ್ನು ಹೆಚ್ಚುವರಿ ಸ್ಥಾಯಿ ಕಾನ್ಸುಲ್ ಆಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಲಿಶಾ ಮತ್ತು ಆಕೆಯ ಪತಿ ರಂಜೀತ್ ಅಲಪ್ಪುಳದ ಬಾರ್‍ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಎದುರೇ ಅವರ ಬರ್ಬರ ಹತ್ಯೆ ನಡೆದಿತ್ತು.
ಈ ಘಟನೆ ಡಿಸೆಂಬರ್ 19, 2021 ರಂದು ನಡೆದಿತ್ತು. ಹತ್ಯೆಗೀಡಾದ ರಂಜೀತ್ ಶ್ರೀನಿವಾಸನ್ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯೂ ಆಗಿದ್ದರು. ರಂಜೀತ್ ಅವರು ಮಲಗಿದ್ದಾಗ ಅಲಪ್ಪುಳದಲ್ಲಿರುವ ಅವರ ಮನೆಗೆ ನುಗ್ಗಿದ ಭಯೋತ್ಪಾದಕರು ಅವರನ್ನು ಕಡಿದು ಕೊಂದಿದ್ದರು.
ರಂಜಿತ್ ಶ್ರೀನಿವಾಸನ್ ಅವರ ಪತ್ನಿ ಅಡ್ವ. ಲಿಶಾ ರಂಜೀತ್ ಹೆಚ್ಚುವರಿ ಸ್ಥಾಯಿ ಕಾನ್ಸುಲ್ ಆಗಿ ನೇಮಕ
0
ಏಪ್ರಿಲ್ 20, 2023