ಕಾಸರಗೋಡು: ಕೋಯಿಕ್ಕೋಡ್ ಸನಿಹದ ತಾಮರಶ್ಯೇರಿಯ ಗಲ್ಫ್ ಉದ್ಯೋಗಿ ಮಹಮ್ಮದ್ ಶಾಫಿ ಅವರನ್ನು ಸುಫಾರಿ ತಂಡ ಅಪಹರಿಸಲು ಕಾಸರಗೋಡಿನ ಕಾರು ಬಳಸಿರುವುದು ತನಿಖೆಯಿಂದ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಅಲ್ಲಿನ ಪೊಲೀಸರು ಪ್ರಕರಣದ ತನಿಖೆ ಕಾಸರಗೋಡಿಗೆ ವಿಸ್ತರಿಸಿದ್ದಾರೆ.
ಕಾಸರಗೋಡು ನಗರದ ಮುಖಂಡರೊಬ್ಬರಿಗೆ ಸೇರಿದ ಕಾರು ಇದಾಗಿದ್ದು, ಅಪಹರಣಕ್ಕೆ ಕಾಸರಗೋಡಿನ ವ್ಯಕ್ತಿಗಳು ಶಾಮೀಲಾಗಿರುವ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಏ. 7ರಂದು ಮಹಮ್ಮದ್ ಶಾಫಿ ತನ್ನ ಮನೆಯಲ್ಲಿ ಪತ್ನಿಯೊಂದಿಗೆ ಮಾತನಾಡುತ್ತಿದ್ದಂತೆ, ಕಾರಿನಲ್ಲಿ ಆಗಮಿಸಿದ್ದ ತಂಡವೊಂದು ದಂಪತಿಯನ್ನು ಬಲವಂತವಾಗಿ ಕಾರಿಗೇರಿಸಿ ಪತ್ನಿಗೆ ಹಲ್ಲೆ ನಡೆಸಿ ಅರ್ಧ ಹಾದಿಯಲ್ಲಿ ಇಳಿಸಿದ್ದರೆ, ಶಾಫಿ ಅವರನ್ನು ಕರೆದೊಯ್ದಿತ್ತು. ಶಾಫಿ ಅವರ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರೆ, ಶಾಫಿ ಅವರ ಪತ್ತೆ ಇದುವರೆಗೆ ಸಾಧ್ಯವಾಗಿಲ್ಲ. ಗಲ್ಫ್ ಕೇಂದ್ರೀಕರಿಸಿ ತಂಡ ನಡೆಸುತ್ತಿದ್ದ ಚಿನ್ನಕಳ್ಳಸಾಗಾಟದ ಬಗ್ಗೆ ಮಹಮ್ಮದ್ ಶಾಫಿ ಮಾಹಿತಿ ನೀಡಿದ್ದಾರೆಂಬ ಸಂಶಯದಲ್ಲಿ ತಂಡ ಇವರನ್ನು ಅಪಹರಿಸಿರುವುದಾಗಿ ಮಾಹಿತಿಯಿದೆ.
ಗಲ್ಫ್ ಉದ್ಯೋಗಿ ಅಪಹರಣ: ಪ್ರಕರಣ ಕಾಸರಗೋಡಿಗೆ ವಿಸ್ತರಣೆ
0
ಏಪ್ರಿಲ್ 12, 2023
Tags