ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವಿಶೇಷ ಸಭೆ ಮಾತೃ ಸಮಿತಿ ಯುವ ಸಮಿತಿ ರೂಪಿಕರಣ ನಡೆಯಿತು. ಮೇ ಒಂದರಂದು ವಿಜ್ಞಾಪನ ಪತ್ರ ಬಿಡುಗಡೆ ಮತ್ತು ನಿಧಿ ಕೂಪನ್ ಬಿಡುಗಡೆ, ಮತ್ತು ಸೇವಾ ಸಮಿತಿಯ ವಾರ್ಷಿಕವಾಗಿ ಲೋಕಕಲ್ಯಾಣಾರ್ಥವಾಗಿ ಬೆಳಗ್ಗೆ ಗಣಪತಿ ಹವನ, ಶತ ರುದ್ರಾಭಿμÉೀಕ, ಸತ್ಯನಾರಾಯಣ ಪೂಜೆ ಬಲಿವಾಡು ಕೂಟ ಸಾಮೂಹಿಕ ಪ್ರಾರ್ಥನೆ, ಸಂಜೆ ದುರ್ಗಾ ಪೂಜೆ ನಡೆಯಲಿರುವುದು. ಇದರ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೆಸರ ನ್ಯಾಯವಾದಿ. ವೆಂಕಟರಮಣ ಭಟ್ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಜಗದೀಶ ಪೆರಡಾಲ, ಮಾಜಿ ಮೊಕ್ತೇಸರರಾದ ಟಿ.ಕೆ. ನಾರಾಯಣ ಭಟ್, ಪಿ.ಜಿ. ಚಂದ್ರಹಾಸ ರೈ, ಡಾ ಶ್ರೀನಿಧಿ ಸರಳಾಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಪ್ರೊ.ಎ.ಶ್ರೀನಾಥ, ನ್ಯಾಯವಾದಿ ನರಸಿಂಹ ಶಣೈ, ತಿರುಪತಿ ಕುಮಾರ್ ಭಟ್ ಮಾತನಾಡಿದರು. ಕುಟುಂಬಶ್ರೀ ಸದಸ್ಯರು, ಕ್ಲಬ್ಬಿನ ಪದಾಧಿಕಾರಿಗಳು, ಸ್ವಸಹಾಯ ಸಂಘ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತೃ ಸಮಿತಿ ರೂಪೀಕರಿಸಲಾಯಿತು. ಗೌರವಾಧ್ಯಕ್ಷೆಯಾಗಿ ವಸಂತಿ ಟೀಚರ್ ಅಗಲ್ಪಾಡಿ, ಜಲಜಾಕ್ಷಿ ಟೀಚರ್(ಅಧ್ಯಕ್ಷೆ), ಶಾರದಾ ನವ ಕಾನ(ಪ್ರ.ಕಾರ್ಯದರ್ಶಿ), ಡಾ.ಶ್ರೀಶ ಕುಮಾರ್ ಪಂಜಿತಡ್ಕ(ಯುವ ವಿಭಾಗ ಸಂಚಾಲಕ), ಭಾಸ್ಕರ.ಪಿ(ಪ್ರ.ಕಾರ್ಯದರ್ಶಿ)ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ. ಜಗನ್ನಾಥ ರೈ ಸ್ವಾಗತಿಸಿ, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ ವಂದಿಸಿದರು. ಜೀರ್ಣೋದ್ಧಾರ ಸಮಿತಿಯ ಮುಂದಿನ ಸಭೆ ಎಪ್ರಿಲ್ 16ರಂದು ನಡೆಯಲಿರುವುದು.