ಅಹಮದಾಬಾದ್: ಗುಜರಾತಿನ ಕಚ್ ಜಿಲ್ಲೆಯ ರಾಪರ್ನಲ್ಲಿ ನಡೆದ ರಾತ್ರಿಯ ಸಂಗೀತ ಕಛೇರಿ ಸಮಯದಲ್ಲಿ ಗಾಯಕಿ ಗೀತಾ ಬೆನ್ ರಾಬರಿ ಮೇಲೆ ನೋಟಿನ ಸುರಿ ಮಳೆಯಾಗಿದೆ.
ಮೂಲಗಳ ಪ್ರಕಾರ ಗಾಯಕಿ ಮೇಲೆ ಸುರಿದ ನೋಟುಗಳ ಒಟ್ಟು ಮೊತ್ತ 4 ಕೋಟಿ ರೂ.
ಅಂದಾಜಿಸಲಾಗಿದೆ.
ಗೋವುಗಳ ರಕ್ಷಣೆಗೆ ಹಣ
ಸಂಗೀತ ಕೇಳಲು ಬಂದವರು ಹಾಡಿನಲ್ಲಿ ಮಗ್ನರಾಗಿ ವೇದಿಕೆ ಮೇಲೆ ಹಣ ಎಸೆದರು. ಗೀತಾ
ಹಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗೀತಾ ಅವರು ತಮ್ಮ
ಇನ್‌ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಗೋವುಗಳ ರಕ್ಷಣೆಗಾಗಿ ಇಷ್ಟು
ಹಣವನ್ನು ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.