ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಸೌರಮಾನ ಯುಗಾದಿ ವಿಷುಕಣಿ ಪರ್ವವನ್ನು ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ, ಶ್ರದ್ಧೆ, ಸಂಭ್ರಮಗಳೊಂದಿಗೆ ಹೊಸ ವರುಷದ ಆಚರಣೆಯೊಂದಿಗೆ ಸಂಪನ್ನಗೊಂಡಿದೆ.
ಶನಿವಾರ ವಿಷು ಪರ್ವದಂಗವಾಗಿ ಸಾಮೂಹಿಕ ಪ್ರಾರ್ಥನೆ, ಉಷ ಪೂಜೆ ನಡೆಯಿತು. ವೇದಮೂರ್ತಿ ಯಸ್. ವಾಸುದೇವ ಸಂಕೇಸ ಇವರ ನೇತೃತ್ವದಲ್ಲಿ ಲಕ್ಷ್ಮೀಶ ಹಾಗೂ ಶಿವರಾಜ ಇವರ ಸಹಕಾರದೊಂದಿಗೆ ವಿಶೇಷ ಸೇವಾರ್ಥ ಪಂಚಾಮೃತ ರುದ್ರಾಭಿಷೇಕ, ರಜತ ಸ್ವರ್ಣ ಅಲಂಕಾರದೊಂದಿಗೆ ಪೂಜಾದಿಗಳು ಜರಗಿತು. ಶೋಭಕೃತು ನಾಮ ಸಂವತ್ಸರದ ಪಂಚಾಂಗ ಶ್ರವಣ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.ಶ್ರೀ ಕ್ಷೇತ್ರದ ವμರ್Áವಧಿ ಉತ್ಸವವು ಏ. 23 ರ ಭಾನುವಾರ ಅಕ್ಷಯ ತೃತೀಯದಂದು ನಡೆಯಲಿದೆ.