ನವದೆಹಲಿ: ಸುಪ್ರಸಿದ್ದ ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ಸೆಲೆಬ್ರಿಟಿಗಳಿಗೆ ಶಾಕ್ ನೀಡಿದ್ದು ಅವರ ಖಾತೆಯಿಂದ ಬ್ಲೂ ಟಿಕ್ ತೆಗೆದು ಹಾಕಿದೆ.
ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು, ರಾಜಕಾರಣಿಗಳ ಪ್ರೊಪೈಲ್ನಲ್ಲಿದ್ದ ಬ್ಲೂ ಟಿಕ್ ಅನ್ನು ತೆಗೆದು ಹಾಕಿದೆ.
ಸೆಲೆಬ್ರಿಟಿಗಳ ಪ್ರೊಪೈಲ್ನಲ್ಲಿದ್ದ ಬ್ಲೂ ಟಿಕ್ ತೆಗೆದು ಹಾಕಲು ಮುಖ್ಯ ಕಾರಣ ಎಂದರೆ ಅದು ಟ್ವಿಟರ್ನ ಮಾಲೀಕ ಎಲಾನ್ ಮಸ್ಕ್ ಜಾರಿಗೆ ತಂದಿರುವ ನೂತನ ನಿಯಮ ಎಂದು ಹೇಳಲಾಗಿದೆ.
ತಮ್ಮ ಖಾತೆಯಲ್ಲಿನ ಬ್ಲೂ ಟಿಕ್ ಉಳಿಸಿಕೊಳ್ಳಲು ಸೆಲೆಬ್ರಿಟಿಗಳು ಸಬ್ಸ್ಕ್ರಿಪ್ಷನ್ ಮೊತ್ತವನ್ನು ಪಾವತಿಸಬೇಕು. ಚಂದಾದಾರಿಕೆ ಮೊತ್ತವನ್ನು ಪಾವತಿಸದೆ ಇರುವವರ ಖಾತೆಗಳಿಂದ ಟ್ವಿಟರ್ ಬ್ಲೂ ಟಿಕ್ ತೆಗೆದು ಹಾಕಿದೆ.
ಟ್ವಿಟರ್ನಲ್ಲಿ ತಮ್ಮ ಖಾತೆಯಲ್ಲಿನ ಬ್ಲೂ ಟಿಕ್ ಉಳಿಸಿಕೊಳ್ಳಲು ಸಬ್ಸ್ಕ್ರಿಪ್ಸನ್ ಮೊತ್ತವನ್ನು ವಿಧಿಸಿದ್ದು ಮೊಬೈಲ್ ಬಳಕೆದಾರರಿಗೆ 650 ರೂ ಹಾಗೂ ವೆಬ್ ಬಳಕೆದಾರರಿಗೆ 900 ರೂ ಶುಲ್ಕವನ್ನು ವಿಧಿಸಿದೆ.
ಯಾರು ಶುಲ್ಕವನ್ನು ಪಾವತಿಸುವುದಿಲ್ಲವೋ ಅವರ ಖಾತೆಗೆ ನೀಡಿರುವ ಬ್ಲೂ ಟಿಕ್ ಅನ್ನು ತೆಗೆದು ಹಾಕಲಾಗುವುದು ಎಂದು ಟ್ವಿಟರ್ನ ಮಾಲೀಕ ಎಲಾನ್ ಮಸ್ಕ್ ಈ ಹಿಂದೆ ತಿಳಿಸಿದ್ದರು.