ಕಾಸರಗೋಡು|: ನಗರದ ಜನರಲ್ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಎರಡು ಲಿಫ್ಟ್‍ಗಳಲ್ಲಿ ಸಣ್ಣ ಲಿಫ್ಟ್ ಕಾರ್ಯಕ್ಷಮತೆಯಿಂದ ಕೂಡಿದ್ದು, ವೀಲ್‍ಚೇರ್ ರೋಗಿಗಳು ಈ ಲಿಫ್ಟ್‍ನೊಂದಿಗೆ ಬರುತ್ತಾರೆ. ಅತಿಯದ ಲಿಫ್ಟ್ ಬಳಕೆಯಿಂದ ಸಂಭಾವ್ಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ರೋಗಿಗಳ ಆಶ್ರಿತರಿಗೆ ಲಿಫ್ಟ್ ಬಳಕೆ ನಿಷೇಧಿಸಲಾಗಿದೆ ಎಂದು ಆಸ್ಪತ್ರೆ ಮೇಲ್ವಿಚಾರಕ ಡಾ. ರಾಜಾರಾಮ್ ತಿಳಿಸಿದ್ದಾರೆ.
ದುರಸ್ತಿಯಲ್ಲಿರುವ ದೊಡ್ಡ ಲಿಫ್ಟ್‍ನ ಅಸಮರ್ಪಕ ಕಾರ್ಯವನ್ನು ಸರಿಪಡಿಸಲು ಕಾರ್ಯವಿಧಾನಗಳು ನಡೆಯುತ್ತಿದ್ದು, ನಂತರ ಇವುಗಳನ್ನೂ ಟ್ರಾಲಿಗಳೊಂದಿಗೆ ಲೋಡ್ ಮಾಡಬಹುದಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಲಿಫ್ಟ್‍ನ ವಾರ್ಷಿಕ ನಿರ್ವಹಣೆಯನ್ನು ಲಿಫ್ಟ್ ಅಳವಡಿಕೆ ಸಂಸ್ಥೆ ಸೇರಿದಂತೆ ಯಾರೂ ಮುಂದಾಗದ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಲಿಫ್ಟ್ ದುರಸ್ತಿಕಾರ್ಯ ಕೈಗೊಳ್ಳಲಾಗಿತ್ತು. ಈ ವರ್ಷ ಲಿಫ್ಟ್ ದುರಸ್ತಿಗಾಗಿ ಎರಡು ಕಂಪನಿಗಳಿಂದ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಪಿಡಬ್ಲ್ಯೂಡಿ ವಿದ್ಯುತ್ ಇಲಾಖೆಯ ಅನುಮತಿಯೊಂದಿಗೆ ಎರಡು ವಾರಗಳವರೆಗೆ ಲಿಫ್ಟ್ ದುರಸ್ತಿಪಡಿಸಲಾಗುವುದು. ಲಿಫ್ಟ್ ಕೆಟ್ಟುಹೋದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಯ ಸಹಾಯದಿಂದ ಒಳರೋಗಿಗಳು ಮತ್ತು ಇತರರನ್ನು ಮೇಲಂತಸ್ತಿಗೆ ಯಾ ಕೆಳಕ್ಕೆ ಸಾಗಿಸಲಾಗುತ್ತದೆ. ಲಿಫ್ಟ್ ದುರಸ್ತಿಯಲ್ಲಿರುವುದರಿಂದ ಆಸ್ಪತ್ರೆಗೆ ದಾಖಲಾಗುವವರಿಗೆ ಯಾವುದೇ ರೀತಿಯ ನಿಯಂತ್ರಣ ಅಥವಾ ಶಸ್ತ್ರಚಿಕಿತ್ಸೆ ಮುಂದೂಡಿರುವ ಪ್ರಕರಣ ನಡೆದಿಲ್ಲ ಎಂದು ಡಾ.ರಾಜಾರಾಂ ತಿಳಿಸಿದ್ದಾರೆ.