ಪೆರ್ಲ:ಎಣ್ಮಕಜೆ ಗ್ರಾಮ ಪಂಚಾಯತಿನ 2022-23ನೇ ಆರ್ಥಿಕ ಯೋಜನೆಗೊಳಪಡಿಸಿದ " "ಕ್ಲೀನ್ ಎಣ್ಮಕಜೆ" ಕಾರ್ಯಕ್ರಮದಂಗವಾಗಿ ಪ್ರಥಮ ಹಂತದ ಶುಚೀಕರಣಕ್ಕೆ ಚಾಲನೆ ನೀಡಲಾಯಿತು.
ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಪಂಚಾಯತಿ ಉಪಾಧ್ಯಕ್ಷೆ ಡಾ. ಫಾತಿಮತ್ ಜಹಾನಾಸ್ ಹಂಸಾರ್, ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯ ಮಹೇಶ್ ಭಟ್, ಪೆರ್ಲ ಕುಟುಂಬ ಆರೋಗ್ಯ ಇಲಾಖೆಯ ಹೆಲ್ತ್ ಇನ್ಸ್ ಪೆಕ್ಟರ್ ಸಜಿತ್, ವ್ಯಾಪಾರಿ ಸಂಘಟನೆ ನೇತಾರರಾದ ಟಿ.ಪ್ರಸಾದ್, ರಾಜರಾಮ ರೈ, ರಾಜರಾಮ ಪೆರ್ಲ, ಗಣೇಶ್ ಭಟ್, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.
ಪಂ. ಕಾರ್ಯದರ್ಶಿ ಆರ್ ಸುನಿಲ್ ಸ್ವಾಗತಿಸಿ ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ ವಂದಿಸಿದರು.
ಪೆರ್ಲ ಪೇಟೆ ಪರಿಸರದಲ್ಲಿ ಶುಚೀಕರಣ ಹಾಗೂ ತ್ಯಾಜ್ಯ ನಿರ್ಮೂಲನೆಗೆ ಹರಿತ ಕರ್ಮ, ಆಶಾ ವರ್ಕರ್, ಕುಟುಂಬಶ್ರೀ,ಉದ್ಯೋಗಿ ಖಾತರಿ ಕಾರ್ಮಿಕರು,ವ್ಯಾಪಾರಿ ಸಂಘಟನೆ ಹಾಗೂ ನಾಗರಿಕರ ಸಹಕಾರದಲ್ಲಿ ಶುಚೀಕರಣ ನಡೆಸಲಾಯಿತು. ಪಂ.ಉದ್ಯೋಗಸ್ಥರು, ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ಉದ್ಯೋಗಿಗಳು ಶುಚೀಕರಣ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
"ಕ್ಲೀನ್ ಎಣ್ಮಕಜೆ" ಯೋಜನೆಯನ್ವಯ ಪೆರ್ಲ ಪೇಟೆ ಪ್ರಥಮ ಹಂತದ ಶುಚೀಕರಣಕ್ಕೆ ಚಾಲನೆ
0
ಏಪ್ರಿಲ್ 02, 2023
Tags