ಒರ್ವ ಮನುಷ್ಯನಿಗೆ ಊಟ, ತಿಂಡಿ ಎಷ್ಟು ಮುಖ್ಯವೋ ನಿದ್ದೆಯೂ ಕೂಡ ಅಷ್ಟೇ ಅವಶ್ಯಕವಾಗಿದೆ. ಮನುಷ್ಯ ಸರಿಯಾಗಿ ನಿದ್ದೆ ಮಾಡದೇ ಹೋದರೆ ಆತ ಖಂಡಿತ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾನೆ. ನಾವು ಸುಖ ನಿದ್ದೆ ಮಾಡಬೇಕಾದರೆ ಅದಕ್ಕೆ ನಮ್ಮ ಹಾಸಿಗೆ ಕೂಡ ಸಹಕರಿಸಲೇಬೇಕು. ಒಂದು ವೇಳೆ ಹಾಸಿಗೆ ಸರಿಯಾಗಿರದಿದ್ದರೆ ನಾವು ರಾತ್ರಿ ಪೂರ್ತಿ ಕಣ್ತುಂಬ ನಿದ್ದೆ ಮಾಡೋದಕ್ಕೆ ಸಾಧ್ಯವಿಲ್ಲ. ಅಷ್ಟಕ್ಕು ಯಾವಾಗ ನಾವು ಹಾಸಿಗೆಯನ್ನು ಬದಲಾಯಿಸಬೇಕು? ಈ ಲಕ್ಷಣಗಳು ಕಂಡು ಬಂದರೆ ಖಂಡಿತ ಹಾಸಿಗೆ ಬದಲಾಯಿಸಲೇಬೇಕು.
1. ನಿಮ್ಮ ದೇಹದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ
ನೀವು ಬೆಳಗ್ಗೆ ಎದ್ದಾಗ ಮೈ, ಕೈ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿ ಪ್ರತಿನಿತ್ಯ ಆಗುತ್ತಿದ್ದರೆ ನಿಮ್ಮ ಹಾಸಿಗೆ ಅದರ ಸಾಮರ್ಥ್ಯವನ್ನು ಕಳೆದುಕೊಂಡಿದೆ ಎಂದರ್ಥ. ಹಾಸಿಗೆಗಳು ಸವೆದಾಗ ಅವು ತಮ್ಮ ಒತ್ತಡ-ನಿವಾರಕ ಗುಣಗಳನ್ನು ಕಳೆದುಕೊಳ್ಳುತ್ತದೆ. ಇದರ ಪರಿಣಾಮ ನಿಮಗೆ ಬೆನ್ನುಮೂಳೆಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಕೀಲುಗಳ ಸುತ್ತ ಒತ್ತಡ ಹೆಚ್ಚಾಗಿ ಬೆನ್ನು ಮೂಳೆ ವಕ್ರವಾಗಬಹುದು. ಈ ರೀತಿ ಆಗುತ್ತಿದ್ದರೆ ನಿದ್ದೆ ಬರೋದಿಲ್ಲ. ಪದೇ ಪದೇ ಎಚ್ಚರಗೊಳ್ಳುತ್ತೀರಿ.
2. ಸರಿಯಾದ ಪ್ರಮಾಣದ ನಿದ್ರೆ
ಸಾಮಾನ್ಯವಾಗಿ ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ಕಾಡುವ ಯೋಚನೆಗಳು ನಮ್ಮನ್ನು ನಿದ್ದೆ ಮಾಡೋದಕ್ಕೆ ಬಿಡೋದಿಲ್ಲ. ವಯಸ್ಕರಿಗೆ 6-9 ಗಂಟೆಗಳ ನಿದ್ದೆ ಅತ್ಯಾವಶ್ಯಕವಾಗಿ ಬೇಕಾಗಿದೆ. ನಿದ್ದೆಯು ನಮ್ಮ ಜೈವಿಕ ಗಡಿಯಾರಕ್ಕೆ ಹೊಂದಾಣಿಕೆಯಾಗುತ್ತದೆ. ನಿದ್ರೆಯು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಖಿನ್ನತೆಯನ್ನು ನಿವಾರಿಸಲು ದೇಹಕ್ಕೆ ಅಗತ್ಯವಾದ ಪ್ರೋಟೀನ್ ಇದ್ದಂತೆ.
3. ಸೂರ್ಯ ಕಿರಣ ಚಿಕಿತ್ಸೆ
ಸಾಮಾನ್ಯವಾಗಿ ಚಳಿಗಾಲ ಹಾಗೂ ಮಳೆಗಾಲದಲ್ಲಿ ಬೆಳಗ್ಗಿನ ಸಮಯದಲ್ಲಿ ನಮಗೆ ಸೂರ್ಯನ ಬೆಳಕು ಲಭ್ಯವಿರೋದಿಲ್ಲ. ಸೂರ್ಯನ ಬೆಳಕು ಲಭ್ಯವಿರದ ಸಂದರ್ಭದಲ್ಲಿ ಜನ ಮಂಕಾಗಿರೋದನ್ನು ನಾವು ಗಮನಿರ್ತೀವಿ. ಆ ಸಮಯದಲ್ಲಿ ಹೊರಗಡೆ ಹೋಗಿ ಯಾವುದೇ ಚಟುವಟಿಕೆ ಮಾಡೋದಕ್ಕೆ ಇಷ್ಟವಾಗೋದಿಲ್ಲ. ಈಗಾಗಗಲೇ ಖಿನ್ನತೆಯಲ್ಲಿರೋರಿಗೆ ಇದು ಮತ್ತಷ್ಟು ಸಮಸ್ಯೆಯನ್ನು ಉಂಟು ಮಾಡಬಹುದು.
ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ 20- 30 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲಿ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಿಮಗೆ ಹೊಸ ಚೈತನ್ಯ ನೀಡುತ್ತದೆ. ಬೆಳಕಿನ ಚಿಕಿತ್ಸೆಯು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದ ನಿದ್ರೆ / ಎಚ್ಚರದ ಚಕ್ರವನ್ನು ಸಾಮಾನ್ಯ ಸ್ಥಿತಿಗೆ ಮರುಹೊಂದಾಣಿಕೆ ಮಾಡುತ್ತದೆ.
4. ಆರೋಗ್ಯಕರ ಆಹಾರ ಸೇವಿಸಿ
ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸೋದ್ರಿಂದ ಹಲವಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪ್ರಮುಖ ಪೋಷಕಾಂಶಗಳ ಕೊರತೆಯಿರುವ ಆಹಾರ ಸೇವಿಸೋದು, ಸಂಸ್ಕರಿಸಿದ ಸಕ್ಕರೆಗಳು ಮತ್ತು ಕೊಬ್ಬುಗಳಿಂದ ತುಂಬಿರುವ ಆಹಾರ ಸೇವಿಸೋದು ಖಿನ್ನತೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಖಿನ್ನತೆಗೆ ಒಳಗಾದವರು ಕಡಿಮೆ ಕೊಬ್ಬು ಮತ್ತು ವಿಟಮಿನ್ B6, ಮೆಗ್ನೀಸಿಯಮ್, B-12 ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರ ಸೇವಿಸಬೇಕು.
5. ಮೀನು ಹಾಗೂ ಮೊಟ್ಟೆ ಸೇವಿಸಬೇಕು
ಒಮೆಗಾ -3 ಕೊಬ್ಬಿನಾಮ್ಲ ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರಗಳು ಮನಸ್ಥಿತಿಯನ್ನು ಸರಾಗಗೊಳಿಸುವ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಪ್‌ಕಾರ್ನ್, ಕಾಳುಗಳು, ಓಟ್ ಮೀಲ್, ಕಡಲೆಕಾಯಿ ಎಣ್ಣೆ ಮತ್ತು ಮೊಟ್ಟೆಯ ಬಿಳಿಭಾಗದಂತಹ ಆಹಾರಗಳು ಖಿನ್ನತೆಯಿರುವ ಬಳಲುತ್ತಿರುವ ಜನರಿಗೆ ತುಂಬಾನೇ ಒಳ್ಳೆಯದು.
6. ಗ್ರೀನ್ ಟೀ
ದೇಹದ ತೂಕ ಇಳಿಸುವವರು ಹೆಚ್ಚಾಗಿ ಗ್ರೀನ್ ಟೀ ಸೇವನೆ ಮಾಡುತ್ತಾರೆ. ಆದರೆ ಖಿನ್ನತೆಯಿಂದ ಹೊರ ಬರೋದಕ್ಕೆ ಕೂಡ ಗ್ರೀನ್ ಟೀ ಉತ್ತಮ ಮನೆಮದ್ದಾಗಿದೆ. ಬೆಳಗ್ಗಿನ ಉಪಹಾರಕ್ಕೂ ಮೊದಲು ಗ್ರೀನ್ ಟೀ ಸೇವಿಸಿ. ಇನ್ನೂ ಗ್ರೀನ್ ಟೀ ನಲ್ಲಿರುವ ಎಲ್- ಥಿಯಾನಿನ್ ಅಂಶವು ಖಿನ್ನತೆಯನ್ನು ಕಡಿಮೆ ಮಾಡೋದಕ್ಕೆ ಪರಿಣಾಮಕಾರಿಯಾಗಿದೆ.
7. ಮೀನಿನ ಎಣ್ಣೆ
ಮೀನಿನ ಎಣ್ಣೆಯಲ್ಲಿ ಒಮೆಗಾ- 3 ಅಂಶವಿದೆ. ಇವು ಮೆದುಳಿಗೆ ಅಗತ್ಯವಾದ ಕೊಬ್ಬಿನಾಮ್ಲಗಳಾಗಿವೆ. ನಮ್ಮ ದೇಹವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ತಯಾರಿಸಲು ಅಸಮರ್ಥವಾಗಿರುವುದರಿಂದ ಅದನ್ನು ನಮ್ಮ ಆಹಾರದಿಂದ ಪಡೆಯಬೇಕು. ಇವು ಮೆದುಳಿಗೆ ಅಗತ್ಯವಾದ ಕೊಬ್ಬಿನಾಮ್ಲಗಳಾಗಿವೆ.
ನಮ್ಮ ದೇಹವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ತಯಾರಿಸಲು ಅಸಮರ್ಥವಾಗಿರುವುದರಿಂದ, ಅದನ್ನು ನಾವು ಸೇವಿಸುವ ಆಹಾರದಿಂದ ಪಡೆಯಬೇಕು. ಅನೇಕ ಅಧ್ಯಯನಗಳ ಪ್ರಕಾರ ಒಮೆಗಾ-3 ಅಂಶವು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಸಾಭೀತಾಗಿದೆ. ಜಪಾನ್ ನಂತಹ ಅತೀ ಹೆಚ್ಚಿನ ಪ್ರಮಾಣದಲ್ಲಿ ಮೀನನ್ನು ಸೇವಿಸುವ ದೇಶದಲ್ಲಿ ಖಿನ್ನತೆಗೊಳಗಾದವರ ಸಂಖ್ಯೆ ಕಡಿಮೆ.
8. ಫೋಲಿಕ್ ಆಮ್ಲ
ಖಿನ್ನತೆಗೆ ಉತ್ತಮ ಪರಿಹಾರವೆಂದರೆ ಫೋಲಿಕ್ ಆಮ್ಲಯುಕ್ತ ಆಹಾರವನ್ನು ಸೇವಿಸಬೇಕು. ಫೋಲೇಟ್ ಬೀನ್ಸ್, ಹಣ್ಣುಗಳು, ಹಸಿರು ತರಕಾರಿಗಳು, ಧಾನ್ಯಗಳು ಹಾಗೂ ವಿಟಮಿನ್ ಬಿಯನ್ನು ಸೇವಿಸಬೇಕು. ಈ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೇ, ಖಿನ್ನತೆಯನ್ನು ಶಮನ ಮಾಡೋದಕ್ಕೂ ಸಹಾಯ ಮಾಡುತ್ತದೆ.
ಈ ಮೇಲೆ ಹೇಳಿರುವ ಮನೆ ಮದ್ದುಗಳನ್ನು ಪಾಲಿಸಿಸುತ್ತಾ, ಕಣ್ಮುಂಬ ನಿದ್ದೆ ಹಾಗೂ ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದರೆ ಖಂಡಿತ ಖಿನ್ನತೆಯಿಂದ ಹೊರಬರಬಹುದು.