ಭೋಪಾಲ್: ದಕ್ಷಿಣ ಆಫ್ರಿಕಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಇತ್ತೀಚೆಗೆ ಕರೆತರಲಾಗಿದ್ದ ಚೀತಾವೊಂದು ಭಾನುವಾರ ಮೃತಪಟ್ಟಿದೆ. 'ಉದಯ್' ಎಂದು ಹೆಸರಿಡಲಾಗಿದ್ದ ಚೀತಾಗೆ ಆರು ವರ್ಷ ವಯಸ್ಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀತಾ ನಿಸ್ತೇಜ ಸ್ಥಿತಿಯಲ್ಲಿರುವುದನ್ನು ಬೆಳಗಿನ ಪರಿಶೀಲನೆ ವೇಳೆ ಗುರುತಿಸಲಾಗಿತ್ತು. ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಮುಖವನ್ನು ಅಡಿಮಾಡಿದ್ದ ಅದನ್ನು ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ಸಂಜೆ 4 ಗಂಟೆ ಹೊತ್ತಿಗೆ ಚೀತಾ ಮೃತಪಟ್ಟಿತು. ಒಂದು ತಿಂಗಳ ಹಿಂದೆಯಷ್ಟೇ ಕುನೊ ಉದ್ಯಾನದಲ್ಲಿ 'ಸಶಾ' ಎಂಬ ಚೀತಾ ಮೃತಪಟ್ಟಿತ್ತು.