ಕುಂಬಳೆ : ನೆಲ, ಜಲ ಸಂರಕ್ಷಣೆಯಿಂದ ಮಾತ್ರ ನಾಡಿನ ಸಂಸ್ಕøತಿ ಉಳಿಸಿ ಬೆಳೆಸಲು ಸಾಧ್ಯ ಎಂದು ತುಳು ಜಾನಪದ ವಿದ್ವಾಂಸ ಡಾ. ಗಣೇಶ ಅಮೀನ್ ಸಂಕಮಾರ್ ತಿಳಿಸಿದ್ದಾರೆ. ಅವರು ಪುತ್ತಿಗೆಯ ಶ್ರೀ ಕುಮಾರ ಸ್ವಾಮಿ(ಎಸ್.ಕೆ.ಎಸ್)ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ಸುವರ್ಣಮಹೋತ್ಸವ ಸಮಾರಂಭದ ಅಂಗವಾಗಿ ಶನಿವಾರ ಪುತ್ತಿಗೆ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ವಠಾರದಲ್ಲಿ ನಡೆದ ಸಾಂಸ್ಕøತಿಕ ಸಮಾರಂಭ, ಸಾಧಕರಿಗೆ ಸನ್ಮಾನ, ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷ ಡಿ. ದಾಮೋದರ ಅಧ್ಯಕ್ಷತೆ ವಹಿಸಿದ್ದರು. ಸಿ.ಬಿ.ಐ ಬೆಂಗಳೂರಿನ ಸೀನಿಯರ್ ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಂಘ ಸಂಸ್ಥೆಗಳು ತೋರುವ ಸಾಮಾಜಿಕ ಬದ್ಧತೆ ನಾಡಿನ ಅಭಿವೃದ್ಧಿಗೆ ಸಹಕಾರಿಯಾಗುವುದು. ಈ ನಿಟ್ಟಿನಲ್ಲಿ ಪುತ್ತಿಗೆಯ ಎಸ್.ಕೆ.ಎಸ್ ಸಂಘಟನೆ ಕಳೆದ ಐವತ್ತು ವರ್ಷಗಳಲ್ಲಿ ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಚಟುವಟಿಕೆ ಶ್ವಾಘನೀಯ ಎಂದು ತಿಳಿಸಿದರು.
ಸಂಘಟನೆ ಹಿರಿಯ ಸದಸ್ಯರಾದ ಪಕ್ಕೀರ, ಎಂ.ಎನ್ ಮಯ್ಯ, ಎಸ್‍ಕೆಎಸ್ ಸಂಘಟನೆ ಅಧ್ಯಕ್ಷ ಶಿವಪ್ರಸಾದ್ ರೈ, ಮಹಿಳಾ ಸಂಘದ ಅಧ್ಯಕ್ಷೆ ಲೋಲಾಕ್ಷಿ ಟೀಚರ್ ಉಪಸ್ಥಿತರಿದ್ದರು. ಈ ಸಮದರ್ಭ ದಿ. ಜೆ. ರವೀಂದ್ರ ಸ್ಮಾರಕ ಪ್ರಶಸ್ತಿಯನ್ನು ಜನಪ್ರಿಯ ನಾಟಕ ಕರ್ತೃ, ರಂಗ ಕಲಾವಿದ ಸಂಜೀವ ದಂಡೆಕೇರಿ ಅವರಿಗೆ ಪ್ರದಾನ ಮಾಡಲಾಯಿತು. ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾರತ ತಂಡದ ಬಾಸ್ಕೆಟ್ ಬಾಲ್ ಪಟು ಶಶಾಂಕ್ ಜಯಶಂಕರ ರೈ ಹಾಗೂ ಮೋಟಾರ್ ಸಐಕಲ್ ರೇಸಿಂಗ್ ಪಟು ಅನೀಶ್ ದಾಮೋದರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕ್ಲಬ್ಬಿನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ನೇತ್ರದಾನ ಮತ್ತು ಅಂಗಾಂಗ ದಾನ ಘೋಷಿಸಿದ ಕ್ಲಬ್ಬಿನ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದರು.
ಗಿರೀಶ್ ಭಟ್ ಸ್ವಾಗತಿಸಿದರು. ಕ್ಲಬ್ಬಿನ ಹಿರಿಯ ಸದಸ್ಯ ಬಾಲಕೃಷ್ಣ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ್ ವಂದಿಸಿದರು. ಶ್ರೀ ಕುಮಾರ ಸವಾಮಿ ನಾಟ್ಯಾಲಯದ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಿತು.
ನೆಲ, ಜಲ ಸಂರಕ್ಷಣೆಯಿಂದ ನಾಡಿನ ಸಂಸ್ಕøತಿ : ಬೆಳೆಸಲು ಸಾಧ್ಯ: ಪುತ್ತಿಗೆ ಕ್ಲಬ್ ಸುರ್ಣಮಹೋತ್ಸವ ಸಮಾರಂಭದಲ್ಲಿ ಡಾ. ಸಂಕಮಾರ್ ಅಭಿಪ್ರಾಯ
0
ಏಪ್ರಿಲ್ 09, 2023