HEALTH TIPS

ಹೀಟ್ ವೇವ್: ಬೆವರು ಕಜ್ಜಿ, ತುರಿಕೆ ತಡೆಗಟ್ಟುವುದು ಹೇಗೆ?

ಉಸ್ಸಾಪ್ಪಾ... ಎಂಥ ಬಿಸಿಲು, ಈ ಉರಿ ಬಿಸಿಲಿಗೆ ಮನೆಯಿಂದ ಹೊರಗಡೆ ಕಾಲಿಡಕ್ಕೆ ಸಾಧ್ಯವಾಗುತ್ತಿಲ್ಲ, ಅಷ್ಟೊಂದು ಉರಿ ಬಿಸಿಲು. ಕೆಲವು ಕಡೆ ಈಗಾಗಲೇ ಉಷ್ಣಾಂಶ 38 ಡಿಗ್ರಿC ದಾಟಿದೆ. ಮೇ ತಿಂಗಳಿನಲ್ಲಿ ಕೆಲವು ಕಡೆಗಳಲ್ಲಿ ಉಷ್ಣಾಂಶ 45 ಡಿಗ್ರಿ C ದಾಟಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಸಿದೆ.
ಈ ಉರಿ ಬಿಸಿಲಿನ ಕಾರಣದಿಂದಾಗಿ ಮಕ್ಕಳಲ್ಲಿ, ದೊಡ್ಡವರಲ್ಲಿ ಬೆವರು ಕಜ್ಜಿಗಳು ಕಂಡು ಬರುತ್ತದೆ. ಈ ಬೆವರು ಕಜ್ಜಿ ಮುಖ, ಕುತ್ತಿಗೆ, ಬೆನ್ನು ಹೀಗೆ ದೇಹದ ಯಾವುದೇ ಭಾಗದಲ್ಲಿ ಬೊಬ್ಬೆ ಏಳುವುದು ಅಥವಾ ಕಜ್ಜಿ ಕಂಡು ಬರುವುದು. ಅದರಲ್ಲೂ ಮಕ್ಕಳ ತ್ವಚೆ ತುಂಬಾನೇ ಸೆನ್ಸಿಟಿವ್ ಇರುವುದರಿಂದ ಈ ಬೇಸಿಗೆಯಲ್ಲಿ ಹೆಚ್ಚಿನ ಆರೈಕೆ ಮಾಡಬೇಕಾಗುತ್ತದೆ. 
ಬೇಸಿಗೆಯಲ್ಲಿ ಈ ಬೆವರು ಕಜ್ಜಿ ತಡೆಗಟ್ಟುವುದು ಹೇಗೆ ಎಂದು ನೋಡೋಣ:
ಮಕ್ಕಳು
ದೊಡ್ಡವರಿಗಿಂತ ಮಕ್ಕಳ ದೇಹ ಹೆಚ್ಚು ಬೆಚ್ಚಗಿರುತ್ತದೆ, ಹವಾಮಾನದ ಉಷ್ಣಾಂಶ ಕೂಡ ಅಧಿಕವಾದಾಗ ಬೆವರು ಕಜ್ಜಿ ಉಂಟಾಗುವುದು.
ಈ ರೀತಿ ಕಂಡು ಬಂದಾಗ
* ಮಕ್ಕಳ ದೇಹವನ್ನು ತಂಪು ಮಾಡಿ
ಮಕ್ಕಳ ಮೈಗೆ ಸೋಪು ಹಚ್ಚಬೇಡಿ ಉಗುರು ಬೆಚ್ಚಗಿನ ಅಥವಾ ತಣ್ಣೀರು ಅಭ್ಯಾಸವಿದ್ದರ ತಣ್ಣೀರಿನಲ್ಲಿ ಮೈ ತೊಳಸಿ.
* ಕಲಾಮೈನ್ ಲೋಷನ್ ಹಚ್ಚಿ
ಕಲಾಮೈನ್ ಲೋಷನ್‌ ಮಕ್ಕಳಿಗೆ ಸುರಕ್ಷಿತ, ಇದನ್ನು ಮೈಗೆ ಹಚ್ಚಿ, ಆದರೆ ಕಣ್ಣು ಬಳಿ ಅಥವಾ ತುಟಿಗೆ ಹಚ್ಚಿ.
* ಓಟ್‌ಮೀಲ್‌ ಪೇಸ್ಟ್‌ ಹಚ್ಚಿ
ಓಟ್‌ಮೀಲ್‌ ಪೇಸ್ಟ್‌ನಿಂದ ಮೈ ತಿಕ್ಕಿ ಇದರಿಂದ ತುರಿಕೆ ಕಡಿಮೆಯಾಗುವುದು.
ಎಣ್ಣೆಯ ಉತ್ಪನ್ನ ಬಳಸಬೇಡಿ
ಪಟ್ರೋಲಿಯಂ ಜೆಲ್ಲಿ, ಮಿನರಲ್ ಆಯಿಲ್ ಇವುಗಳು ಬೇಸಿಗೆ ಸೂಕ್ತವಲ್ಲ, ಚಳಿಗಾಲಕ್ಕಷ್ಟೇ ಸೂಕ್ತ ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಬಳಸಬೇಡಿ.
ದೊಡ್ಡವರು
* ದೊಡ್ಡವರು ಕೂಡ ಅಷ್ಟೇ ತಣ್ಣೀರಿನಲ್ಲಿ ಮೈ ತೊಳೆಯಿರಿ
* ಹೊರಗಡೆ ಹೋಗುವಾಗ ತಲೆಗೆ ಕ್ಯಾಪ್ ಬಳಸಿ.

ಬೆವರು ಕಜ್ಜಿ ಲಕ್ಷಣಗಳು
* ಮೈಯಲ್ಲಿ ಕೆಂಪು ಕೆಂಪು ಗುಳ್ಳೆ.
* ಉರಿಕೆ
* ಉರಿ
* ಉರಿಯೂತ
ಈ ಮುನ್ನೆಚ್ಚರಿಕೆವಹಿಸಿ
* ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್ ಹಚ್ಚಿ
* ಮೈ ಉಷ್ಣತೆ ಉಷ್ಣಾಂಶ ಹೆಚ್ಚಾದಾಗ ತಣ್ಣೀರ ಸ್ನಾನ ಮಾಡಿ, ಮಕ್ಕಳ ಮೈಯನ್ನು ತಣ್ಣೀರಿನಲ್ಲಿ ಒರೆಸಿ.

ಬೆವರು ಕಜ್ಜಿ ತಡೆಗಟ್ಟಲು ಏನು ಮಾಡಬೇಕು? * ತಣ್ಣೀರಿನಲ್ಲಿ ಸ್ನಾನ ಮಾಡಿ * ಕೋಲ್ಡ್ ಕಂಪ್ರೆಸ್‌ ತೆಗೆದುಕೊಳ್ಳಿ * ಏರ್‌ ಕಂಡೀಷನರ್‌ ಅಥವಾ ಫ್ಯಾನ್‌ನಡಿಯಲ್ಲಿ ಕುಳಿತುಕೊಳ್ಳಿ. * ಸಡಿಲವಾದ ಕಾಟನ್ ಬಟ್ಟೆ ಧರಿಸಿ. * ಕಲಾಮೈನ್ ಲೋಷನ್ ಬಳಸಿ * ಓಟ್‌ ಮೀಲ್‌ ಸ್ನಾನ ಒಳ್ಳೆಯದು * ತುರಿಕೆ ತುಂಬಾ ಇದ್ದಾಗ ಆಂಟಿಇಸ್ತಾಮೈನ್‌( antihistamine) ತೆಗೆದುಕೊಳ್ಳಿ. ಇದರಿಂದ ತುರಿಕೆ ತಡೆಗಟ್ಟಬಹುದು. * ಅಡುಗೆ ಸೋಡಾ ಹಾಕಿ ಸ್ನಾನ ಮಾಡಿ : ಸ್ನಾನದ ನೀರಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಸ್ನಾನ ಮಾಡಿದರೆ ತುರಿಕೆ ಕಡಿಮೆ ಮಾಡುವುದು. * ಲೋಳೆಸರ ಹಚ್ಚಿ: ಮಕ್ಕಳಿಗೆ ಲೋಳೆಸರ ಹಚ್ಚಿ, ದೊಡ್ಡವರು ಕೂಡ ಲೋಳೆರ ಹಚ್ಚಿದರೆ ತುರಿಕೆ ಕಡಿಮೆಯಾಗುವುದು. * ಸಾಕಷ್ಟು ನೀರು ಕುಡಿಯಿರಿ * ಎಳನೀರು ಸೇವಿಸಿ * ಹಣ್ಣು, ತರಕಾರಿಗಳನ್ನು ಬಳಸಿ. ಯಾವಾಗ ವೈದ್ಯರನ್ನು ಭೇಟಿಯಾಗಬೇಕು? * ಮೈ ತುಂಬಾ ಕಜ್ಜಿ ಉಂಟಾಗಿದ್ದರೆ * ಜ್ವರ * ತುಂಬಾ ತುರಿಕೆ * ಕಜ್ಜಿ ಒಡೆದು ನೀರು ಬರುತ್ತಿದ್ದರೆ * ಗಾಯದಿಂದ ರಕ್ತ ಬರುತ್ತಿದ್ದರೆ * ಗುಳ್ಳೆಗಳು ಇದ್ದಕ್ಕಿದ್ದಂತೆ ಮೈ ಪೂರ್ತಿ ಹರಡಿದರೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಚರ್ಮರೋಗ ತಜ್ಞರಿಗೆ ತೋರಿಸಿ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries