HEALTH TIPS

ಮಿಜೋರಾಂ ಭಾರತದಲ್ಲಿ ಹೆಚ್ಚು ಸಂತೋಷಭರಿತ ರಾಜ್ಯ: ವರದಿ

 

               ಐಜ್ವಲ್: ಮಿಜೋರಾಂ ರಾಜ್ಯ ಭಾರತದಲ್ಲಿ ಹೆಚ್ಚು ಸಂತೋಷಭರಿತ ರಾಜ್ಯ ಎಂದು ವರದಿಯೊಂದು ಹೇಳಿದೆ.

                    ಗುರುಗ್ರಾಮದ ಮ್ಯಾನೇಜ್‌ಮೆಂಟ್ ಡೆವೆಲಫ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಸ್ಟ್ಯಾಟರ್ಜಿ ಪ್ರೊಪೇಸರ್ ರಾಜೇಶ್ ಕೆ ಪಿಳ್ಳಾನೀಯಾ ಅವರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿಯನ್ನು ಕಂಡುಕೊಂಡಿದ್ದಾರೆ.ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

                ಮಿಜೋರಾಂ ಸಾಕ್ಷರತೆಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಜ್ಯ. ಇಲ್ಲಿ ವಿದ್ಯಾರ್ಥಿಗಳಿಗೆ ತೆರೆದುಕೊಳ್ಳುತ್ತಿರುವ ಹೊಸ ಅವಕಾಶಗಳು ಮಿಜೋರಾಂ ಅನ್ನು ಸಂತುಷ್ಠಿಯ ಕಡೆಗೆ ಕರೆದೊಯ್ಯುತ್ತಿವೆ ಎಂದು ತಿಳಿಸಿದ್ದಾರೆ.

                 ಈ ಅಧ್ಯಯನವು ಎಲ್ಲ ರಾಜ್ಯಗಳನ್ನು ಅಧ್ಯಯನಕ್ಕೆ ತೆಗೆದುಕೊಂಡಿದ್ದು ಕೌಟುಂಬಿಕ ಸಂಬಂಧಗಳು, ಕೆಲಸದ ಸಂಗತಿಗಳು, ಸಾಮಾಜಿಕ ಸಂಗತಿ ಹಾಗೂ ಸಹಕಾರ, ಧಾರ್ಮಿಕ ಸಂಗತಿಗಳು ಹಾಗೂ ಕೋವಿಡ್ ನಂತರ ಆದ ಬದಲಾವಣೆಗಳು ಎಂಬ ಆರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಧ್ಯಯನ ನಡೆಸಲಾಗಿದೆ.

                 ಈ ಎಲ್ಲ ಸಂಗತಿಗಳ ಮೇಲೆ ಮಿಜೋರಾಂನಲ್ಲಿ ಸಕಾರಾತ್ಮಕ ಅಂಶಗಳು ಕಂಡು ಬಂದಿದ್ದರಿಂದ ಮಿಜೋರಾಂ ಹೆಚ್ಚು ಸಂತೋಷಭರಿತ ರಾಜ್ಯ ಎಂದು ರಾಜೇಶ್ ಕೆ ಪಿಳ್ಳಾನೀಯಾ ಅವರ ಅಧ್ಯಯನ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries