HEALTH TIPS

ದುಬಾರಿ ಬೆಲೆಯ ಮಾವಿನ ಹಣ್ಣಿನ ಬಾಕ್ಸ್ ಕದ್ದೊಯ್ದಿದ್ದ ಕೇರಳ ಪೋಲೀಸ್ ಅಧಿಕಾರಿಗೆ ಸಂಕಷ್ಟ, ಸೇವೆಯಿಂದಲೇ ವಜಾ

                 ತಿರುವನಂತಪುರಂ: ಸಿವಿಲ್ ಪೊಲೀಸ್ ಅಧಿಕಾರಿಯೊಬ್ಬರು ಅಂಗಡಿಯೊಂದರಿಂದ 10 ಕೆಜಿ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ಕದ್ದೊಯ್ದಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ, ಕೇರಳದ ಪೊಲೀಸ್ ಇಲಾಖೆ ಬುಧವಾರ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿದೆ.

                  ಇಡುಕ್ಕಿಯ ಪೊಲೀಸ್ ಅಧೀಕ್ಷಕರು ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪೊಲೀಸ್ ಅಧಿಕಾರಿ ಪಿ.ವಿ. ಶಿಹಾಬ್ ಅವರು ಕೊಟ್ಟಾಯಂ ಜಿಲ್ಲೆಯ ಕಂಜಿರಪಲ್ಲಿಯ ಅಂಗಡಿಯೊಂದರ ಮುಂಭಾಗ ಇರಿಸಲಾಗಿದ್ದ ಮಾವಿನ ಹಣ್ಣಿನ ಪೆಟ್ಟಿಗೆಯನ್ನು ಒಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗ ಕೆಜಿ ಮಾವಿನಹಣ್ಣಿಗೆ 500 ರೂ.ಗೂ ಅಧಿಕ ಬೆಲೆಯಿತ್ತು. ಬಳಿಕ ಅವರು, ತಮ್ಮ ದ್ವಿಚಕ್ರ ವಾಹನದ ಮೇಲೆ ಬಾಕ್ಸ್ ಇಟ್ಟುಕೊಂಡು ಓಡಿಸುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು.

               ಅಂಗಡಿಯವನು ಮರುದಿನ ತನ್ನ ಅಂಗಡಿಯನ್ನು ತೆರೆಯಲು ಬಂದಾಗ, ಮಾವಿನ ಹಣ್ಣಿನ ಪೆಟ್ಟಿಗೆ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ತಮ್ಮ ಸಿಸಿಟಿವಿಯನ್ನು ಪರಿಶೀಲಿಸಿದಾಗ ಪೊಲೀಸರು ಹಣ್ಣನ್ನು ತೆಗೆದುಕೊಂಡು ಹೋಗಿರುವುದನ್ನು ಕಂಡು ಗಾಬರಿಗೊಂಡಿದ್ದರು. ವಿಡಿಯೋ ವೈರಲ್ ಆದ ನಂತರ, ಇಡುಕ್ಕಿ ಸಶಸ್ತ್ರ ಮೀಸಲು ಶಿಬಿರ ಪೊಲೀಸ್ ಘಟಕಕ್ಕೆ ನಿಯೋಜಿಸಲಾಗಿದ್ದ ಶಿಹಾಬ್ ನಾಪತ್ತೆಯಾಗಿದ್ದರು. ಕೂಡಲೇ ಆತನ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ನಂತರ ಇಡುಕ್ಕಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries