ಕಾಸರಗೋಡು: ಕೆಂಪುಕಲ್ಲು ಕ್ವಾರಿಗಳು ಎದುರಿಸುತ್ತಿರುವ ಸಂದಿಗ್ಧಾವಸ್ಥೆ ಬಗೆಹರಿಸುವಂತೆ ಆಗ್ರಹಿಸಿ ಏ. 24ರಿಂದ ಕೆಂಪುಕಲ್ಲು ಕ್ವಾರಿಗಳನ್ನು ಮುಚ್ಚಿ ಮುಷ್ಕರ ಹೂಡುವುದಾಗಿ ಸಂಘಟನೆ ಪದಾಧಿಖಾರಿಗಳು ತಿಳಿಸಿದ್ದಾರೆ. ಕೆಂಪುಕಲ್ಲು ಕ್ವಾರಿ ಕಾರ್ಮಿಕರೂ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾ. 31ರಂದು ಜಾರಿಗೆ ಬಂದಿರುವ ಕೇರಳ ಮೈನಿಂಗ್ ಆ್ಯಂಡ್ ಜಿಯಾಲಜಿ ಇಲಾಖೆಯ ಹೊಸ ನಿಬಂಧನೆಗಳು ಕೆಂಪು ಕಲ್ಲು ಕ್ವಾರಿಗಳ ಅಸ್ತಿತ್ವಕ್ಕೆ ಧಕ್ಕೆಯುಂಟಾಗಲಿದೆ, ಅಲ್ಲದೆ ಈ ವಲಯವನ್ನು ಸಂಕಷ್ಟಕ್ಕೆ ತಲ್ಳಲಿದೆ.ಈ ಹಿಂದೆ ನೀಡಲಾಗುತ್ತಿದ್ದ ಮಾದರಿಯಲ್ಲಿ ಪಾಸ್ ವ್ಯವಸ್ಥೆ ಮುಂದುವರಿಸದೆ, ಸರ್ಕಾರದ ಪಾಲು ಹೆಚ್ಚಿಸಿರುವುದು ಸಂಕಷ್ಟಕ್ಕೆ ಹದಿಮಾಡಿಕೊಡಲಿರುವುದಗಿ ಕ್ವಾರಿ ಮಾಲಿಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.