HEALTH TIPS

ಕಾನೂನಿನ ಆಡಳಿತವನ್ನು ಸಂಭ್ರಮಿಸಬೇಕೇ, ಅದರ ಸಾವಿಗೆ ದುಃಖಿಸಬೇಕೇ?: ಕಪಿಲ್ ಸಿಬಲ್ ಪ್ರಶ್ನೆ‌

                      ವದೆಹಲಿ: 2002ರ ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದ ನರೋದಾ ಗಾಮ್ ಪ್ರಕರಣದ ಎಲ್ಲಾ 67 ಆರೋಪಿಗಳನ್ನು ದೋಷಮುಕ್ತಗೊಳಿಸಿದ ಅಹ್ಮದಾಬಾದ್ ನ್ಯಾಯಾಲಯದ ನಿರ್ಧಾರವನ್ನು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಶುಕ್ರವಾರ ಟೀಕಿಸಿದ್ದಾರೆ.

                 ''ನಾವು ಕಾನೂನಿನ ಆಡಳಿತವನ್ನು ಸಂಭ್ರಮಿಸಬೇಕೇ ಅಥವಾ ಅದರ ಸಾವಿಗೆ ದುಃಖಿಸಬೇಕೇ'' ಎಂದು ಅವರು ಪ್ರಶ್ನಿಸಿದ್ದಾರೆ.

                    ಅಹ್ಮದಾಬಾದ್ ನ ನರೋದಾ ಗಾಮ್ ನಲ್ಲಿ ಮುಸ್ಲಿಮ್ ಸಮುದಾಯದ 11 ಮಂದಿ ಕೊಲೆಯಾದ 21 ವರ್ಷಗಳ ಬಳಿಕ, ಅಹ್ಮದಾಬಾದ್ ನ ವಿಶೇಷ ನ್ಯಾಯಾಲಯವೊಂದು ಗುರುವಾರ ಪ್ರಕರಣದ ಎಲ್ಲಾ 67 ಮಂದಿಯನ್ನು ದೋಷಮುಕ್ತಗಳಿಸಿದೆ. ದೋಷಮುಕ್ತಗೊಂಡವರಲ್ಲಿ, ಅಂದು ಗುಜರಾತ್ ಸರಕಾರದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿ ಮತ್ತು ಬಜರಂಗ ದಳ ನಾಯಕ ಬಾಬು ಬಜರಂಗಿ ಇದ್ದಾರೆ.

                   ಈ ತೀರ್ಪಿಗೆ ಪ್ರತಿಕ್ರಿಯಿಸಿರುವ ಕಪಿಲ್ ಸಿಬಲ್, ''ನರೋದಾ ಗಾಮ್: 12 ವರ್ಷದ ಬಾಲಕಿಯೂ ಸೇರಿದಂತೆ ನಮ್ಮ ನಾಗರಿಕರ ಪೈಕಿ 11 ಮಂದಿಯ ಕೊಲೆಯಾಯಿತು. 21 ವರ್ಷಗಳ ಬಳಿಕ, 67 ಆರೋಪಿಗಳು ದೋಷಮುಕ್ತಗೊಂಡರು. ನಾವು ಕಾನೂನಿನ ಆಡಳಿತವನ್ನು ಸಂಭ್ರಮಿಸಬೇಕೇ ಅಥವಾ ಅದರ ಸಾವಿಗೆ ದುಃಖಿಸಬೇಕೇ?'' ಎಂಬುದಾಗಿ ಟ್ವಿಟರ್ನಲ್ಲಿ ಬರೆದಿದ್ದಾರೆ.

                    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಯಾರನ್ನೋ ಕೊಲೆ ಮಾಡಲಾಯಿತು. ಕೊಲೆ ಯಾರು ಮಾಡಿದರು ಎನ್ನುವುದನ್ನು ಪತ್ತೆಹಚ್ಚುವುದು ತನಿಖಾ ಸಂಸ್ಥೆಯ ಕೆಲಸ. ತನಿಖಾ ಸಂಸ್ಥೆಯು ಕೊಲೆ ಮಾಡಿದವರನ್ನು ಪತ್ತೆಹಚ್ಚಿತು. ಆರೋಪಿಗಳಿಗೆ ಶಿಕ್ಷೆಯಾಗದಿರುವುದು ತನಿಖಾ ಸಂಸ್ಥೆಯ ವೈಫಲ್ಯವಲ್ಲವೇ? ತನಿಖಾ ಸಂಸ್ಥೆಗಳು ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕೇ ಅಥವಾ ಅವರ ದೋಷಮುಕ್ತಿಯನ್ನು ಕೋರಬೇಕೇ? ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ಮೇಲ್ಮನವಿ ಸಲ್ಲಿಸುವುದಿಲ್ಲ ಎನ್ನುವುದು ಸ್ಪಷ್ಟ'' ಎಂದು ಹೇಳಿದರು.

                   ''ನ್ಯಾಯಾಲಯದ ವಿಚಾರಣೆಗಳಲ್ಲಿ ಒಂದರ ಬಳಿಕ ಒಂದರಂತೆ ಅನ್ಯಾಯವೇ ವಿಜೃಂಭಿಸುತ್ತಿದೆ. ಇದನ್ನು ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿವೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆೆ'' ಎಂದರು.

               ಅಯೋಧ್ಯೆಯಿಂದ ಮರಳುತ್ತಿದ್ದ ಸಾಬರ್ಮತಿ ರೈಲು ಬೆಂಕಿಗೆ ಆಹುತಿಯಾದ ಬಳಿಕ, ಗುಜರಾತ್ ರಾಜ್ಯಾದ್ಯಂತ ಮುಸ್ಲಿಮರ ವಿರುದ್ಧ ಭುಗಿಲೆದ್ದ ಹಿಂಸಾಚಾರದ ವೇಳೆ ನರೋದಾ ಗಾಮ್ ಹತ್ಯಾಕಾಂಡವೂ ನಡೆದಿತ್ತು. ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡ (ಸಿಟ್) ನಡೆಸಿತ್ತು. ಆದರೆ, ವಿಶೇಷ ತನಿಖಾ ತಂಡ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್.ಕೆ. ಬಕ್ಷಿ, ಭೀಕರ ಹತ್ಯಾಕಾಂಡ ಪ್ರಕರಣದ ಎಲ್ಲಾ ಆರೋಪಿಗಳನ್ನು ಗುರುವಾರ ದೋಷಮುಕ್ತಗೊಳಿಸಿದ್ದಾರೆ.

                     ಪ್ರಕರಣದಲ್ಲಿ ಆರಂಭದಲ್ಲಿ ಒಟ್ಟು 86 ಆರೋಪಿಗಳಿದ್ದರು. ಅವರ ಪೈಕಿ 18 ಮಂದಿ ವಿಚಾರಣೆಯ ಸುದೀರ್ಘ ಅವಧಿಯಲ್ಲಿ ನಿಧನರಾಗಿದ್ದಾರೆ. ಆರೋಪಿಗಳ ಪೈಕಿ ಒಬ್ಬನನ್ನು ಸಾಕ್ಷಗಳ ಕೊರತೆಯಿಂದಾಗಿ ನ್ಯಾಯಾಲಯವು ಹಿಂದೆಯೇ ದೋಷಮುಕ್ತಗೊಳಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries