ಕೋಝಿಕ್ಕೋಡ್: ಎಲತ್ತೂರ್ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಶಾರುಖ್ ಸೈಫಿಗೆ ರಿಮಾಂಡ್ ವಿಧಿಸಲಾಗಿದೆ. ಮ್ಯಾಜಿಸ್ಟ್ರೇಟ್ ನೇರವಾಗಿ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬಂದು ರಿಮಾಂಡ್ ವಿಧಿಸಿದರು.
ಸೈಪಿಯ ವೈದ್ಯಕೀಯ ಪರೀಕ್ಷೆಯ ಫಲಿತಾಂಶ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ಫಲಿತಾಂಶವು ಸೈಫಿಗೆ ಯಾವುದೇ ಗಂಭೀರ ಸುಟ್ಟಗಾಯಗಳಾಗಿಲ್ಲ ಎಂದು ತಿಳಿಸಿದೆ. ಎರಡು ಕೈಗಳಲ್ಲಿ ಮಾತ್ರ ಸಣ್ಣ ಸುಟ್ಟ ಗಾಯಗಳಾಗಿವೆ. ಈ ಸುಟ್ಟಗಾಯಗಳು ಶೇಕಡಾ ಒಂದಕ್ಕಿಂತ ಕಡಿಮೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಯಕೃತ್ತಿನ ಕಾರ್ಯ ದುರ್ಬಲವಾಗಿರುವುದು ಕಂಡುಬಂದಿದೆ.
ಇದೇ ವೇಳೆಗೆ ಬೆಂಕಿ ಹಚ್ಚಿ ರೈಲಿನಿಂದ ತಪ್ಪಿಸಿಕೊಳ್ಳುವಾಗ ಬಿದ್ದ ರಭಸಕ್ಕೆ ಆತನ ದೇಹಕ್ಕೆ ಅಲ್ಪ ಹಾನಿಯಾಗಿಎ. ಮುಖದ ಎಡಭಾಗದಲ್ಲಿ ಒಂದು ಬದಿ ಊತವಿದೆ. ಕಣ್ಣಿನ ಬದಿ ಊತಗೊಂಡಿದೆ. ಆದರೆ ದೃಷ್ಟಿ ಕುಂಠಿತವಾಗಿಲ್ಲ. ಎಡಗೈಯ ಕಿರುಬೆರಳಿನಲ್ಲಿ ಸಣ್ಣ ಗಾಯವಾಗಿದೆ. ದೇಹದ ಮೇಲಿರುವ ಗಾಯಗಳು ಹೆಚ್ಚೆಂದರೆ ನಾಲ್ಕು ದಿನ ಮಾತ್ರ ಎಂದು ವೈದ್ಯಕೀಯ ಪರೀಕ್ಷೆಯ ಫಲಿತಾಂಶದಿಂದಲೂ ಸ್ಪಷ್ಟವಾಗಿದೆ.
ಪೋರೆನ್ಸಿಕ್ ತಜ್ಞರು ರೈಲಿನಿಂದ ಜಿಗಿದ ಕಾರಣ ಗಾಯಗಳಾಗಿವೆ ಎಂದು ತೀರ್ಮಾನಿಸಿದ್ದಾರೆ. ಜಾಂಡೀಸ್ ಇರುವುದು ಪತ್ತೆಯಾದ ನಂತರ ಶಾರುಖ್ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಶಾರುಖ್ ಸೈಫಿ ಯನ್ನು ಪೊಲೀಸ್ ಸೆಲ್‍ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ದಾಖಲಿಸಲಾಗಿದೆ. ಸೆಲ್ ಹೊರಗೆ ಬರೋಬ್ಬರಿ 20 ಪೆÇಲೀಸರು ಇದ್ದಾರೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಸಂಪೂರ್ಣ ಪೆÇಲೀಸ್ ಕಣ್ಗಾವಲಿನಲ್ಲಿದೆ.
ಶಾರುಖ್ ಸೈಫೀಗೆ ರಿಮಾಂಡ್: ಕೇವಲ ಒಂದು ಶೇಕಡಾ ಸುಟ್ಟಗಾಯ: ಯಕೃತ್ತಿಗೆ ತೊಂದರೆ: ವರದಿ
0
ಏಪ್ರಿಲ್ 07, 2023