ಕೊಚ್ಚಿ: ಅಸ್ಲಾ ಮಾರ್ಲಿ ಓರ್ವ ಮಹಿಳಾ ಯೂಟ್ಯೂಬರ್. ನಾವು ವಾಸಿಸುವ ಆಧುನಿಕ ಸಮಾಜದಲ್ಲೂ ಇನ್ನೂ ಕಳಂಕವಾಗಿ ಉಳಿದುಕೊಂಡಿರುವ ಕಾಮಾಸಕ್ತಿಯ ಅನುಭವಗಳು ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ತಾವು ಆಡುವ ಮಾತುಗಳಿಂದಲೇ ಮಾರ್ಲಿ ಖ್ಯಾತಿ ಪಡೆದಿದ್ದಾರೆ.
ಇದೀಗ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರ್ಲಿ, ಲೈಂಗಿಕತೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರಮಂದಿರದಿಂದ ಎದ್ದು ಬಂದೆ
ಓರ್ವ ವ್ಯಕ್ತಿ ಸಾರ್ವಜನಿಕ
ಪ್ರದೇಶದಲ್ಲೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಾನು ನೋಡಿದ್ದೇನೆ. ಅದೊಂದು ಸಣ್ಣ
ರಸ್ತೆಯಾಗಿತ್ತು ಜನರು ಓಡಾಡು ರಸ್ತೆಯಲ್ಲೇ ಆತ ಹಸ್ತಮೈಥುನದಲ್ಲಿ ತೊಡಗಿದ್ದ. ಇದೇ
ರೀತಿಯ ಅನುಭವವನ್ನು ನಾನು ಚಿತ್ರಮಂದಿರದ ಒಳಗೂ ಅನುಭವಿಸಿದ್ದೇನೆ. ನನ್ನ ಪಕ್ಕದಲ್ಲಿ
ಕುಳಿತಿದ್ದ ಓರ್ವ ಯುವಕ, ತನ್ನ ಪ್ಯಾಂಟ್ ಜಿಪ್ ತೆಗೆದು, ನನ್ನ ಎದುರಲ್ಲೇ ಹಸ್ತಮೈಥುನ
ಮಾಡಿಕೊಂಡನು. ಈ ವೇಳೆ ನಾನು ಸಿನಿಮಂದಿರದಿಂದಲೇ ಎದ್ದು ಹೊರಬಂದಿದ್ದೆ ಎಂದು ಅಸ್ಲಾ
ಹೇಳಿದ್ದಾರೆ.
ಪುರುಷರ ಕಾಂಡೋಮ್ಗಿಂತ ಮೂರು ಪಟ್ಟು ಹೆಚ್ಚು
ನಮ್ಮ ದೇಶದಲ್ಲಿ ಬಹುತೇಕರಿಗೆ ಮಹಿಳಾ ಕಾಂಡೋಮ್ಗಳು ಮಾರುಕಟ್ಟೆಯಲ್ಲಿ ಇವೆ ಎಂಬುದೇ
ತಿಳಿದಿಲ್ಲ. ಪುರುಷರ ಕಾಂಡೋಮ್ಗಳು ಎಲ್ಲ ಕಡೆ ಇವೆ ಮತ್ತು ಮಾರುಕಟ್ಟೆಗಳಲ್ಲಿ
ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುತ್ತವೆ. ಮಹಿಳೆಯರ ಕಾಂಡೋಮ್ಗಳು ಹೆಚ್ಚು
ಪರಿಣಾಮಕಾರಿಯಾಗಿದೆ. ಆದರೆ, ಪುರುಷರ ಕಾಂಡೋಮ್ಗಿಂತ ಮೂರು ಪಟ್ಟು ಹೆಚ್ಚಿನ ಬೆಲೆ ಇದೆ
ಎಂದು ಅಸ್ಲಾ ತಿಳಿಸಿದರು.
ಯಾರೂ ಪೋರ್ನ್ ವೀಡಿಯೋಗಳಿಗೆ ಹೊಸಬರಲ್ಲ
ಇಂದಿನ ದಿನಗಳಲ್ಲಿ ಮಕ್ಕಳು ಸಹ ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ. ಈ ಸಮಕಾಲೀನ ಕಾಲದಲ್ಲಿ ಯಾರೂ ಪೋರ್ನ್ ವೀಡಿಯೋಗಳಿಗೆ ಹೊಸಬರಲ್ಲ. ಎಲ್ಲರೂ ಒಮ್ಮೆ ಪ್ರಯತ್ನಿಸಿದ್ದಾರೆ. ದೃಶ್ಯಗಳನ್ನು ವಾಸ್ತವವಾಗಿಸಲು ಪ್ರಯತ್ನಿಸುವಾಗ ಸಮಸ್ಯೆ ಬರುತ್ತದೆ. ಇದರಿಂದ ಹಲವು ಸಂಬಂಧಗಳು ಹಳಸಿ ಹೋಗಿವೆ. ಯಾವುದೇ ಉದ್ಯಮಕ್ಕಿಂತ ಹೆಚ್ಚಾಗಿ ಅಶ್ಲೀಲ ಮತ್ತು ಲೈಂಗಿಕ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂದು ಅಸ್ಲಾ ಹೇಳಿದರು.