ಮುಂಬೈ: 'ಅಭಿಮಾನಿಗಳು ಉಡುಗೊರೆ ಕೊಟ್ಟಂಥ ಸಾರಿ ಧರಿಸಿ ಅಕ್ಕ(ಲತಾ ಮಂಗೇಶ್ಕರ್) ಪ್ರೇಕ್ಷಕರ ನಡುವಿನಲ್ಲಿದ್ದಾರೆ' ಎಂದು ಖ್ಯಾತ ಹಿನ್ನೆಲೆ ಗಾಯಕಿ ಆಶಾಭೋಸ್ಲೆ ಅವರು ಲತಾ ಮಂಗೇಶ್ಕರ್ ಅವರನ್ನು ನೆನಪಿಸಿಕೊಂಡರು.
ಮುಂಬೈ: 'ಅಭಿಮಾನಿಗಳು ಉಡುಗೊರೆ ಕೊಟ್ಟಂಥ ಸಾರಿ ಧರಿಸಿ ಅಕ್ಕ(ಲತಾ ಮಂಗೇಶ್ಕರ್) ಪ್ರೇಕ್ಷಕರ ನಡುವಿನಲ್ಲಿದ್ದಾರೆ' ಎಂದು ಖ್ಯಾತ ಹಿನ್ನೆಲೆ ಗಾಯಕಿ ಆಶಾಭೋಸ್ಲೆ ಅವರು ಲತಾ ಮಂಗೇಶ್ಕರ್ ಅವರನ್ನು ನೆನಪಿಸಿಕೊಂಡರು.
ಸೋಮವಾರ ರಾತ್ರಿ ಇಲ್ಲಿ ನಡೆದ ಮಂಗೇಶ್ಕರ್ ಫ್ಯಾಮಿಲಿ ಅವಾರ್ಡ್ ಕಾರ್ಯಕ್ರಮವು ಅಮೂಲ್ಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು.
'ಈ ಪ್ರಶಸ್ತಿ ಅಮೂಲ್ಯವಾದುದು. ಲತಾಕ್ಕ ಇಲ್ಲಿ ಸೇರಿದ ಜನರ ನಡುವಿನಲ್ಲಿದ್ದಾರೆ' ಎಂದು 89 ವರ್ಷದ ಆಶಾ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ದೀನಾನಾಥರ ಐವರು ಮಕ್ಕಳಲ್ಲಿ ಮೂರನೆಯವರಾದ ಆಶಾ ಅವರು, ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ಸಂಗೀತ ಸಂಯೋಜಿಸಿದ್ದ ಲತಾ ಅವರ ಹಿನ್ನೆಲೆ ಗಾಯನವಿದ್ದ 'ಮೊಗರಾ ಫುಲಾಲ' ಎಂಬ ಮರಾಠಿ ಹಾಡನ್ನು ಹಾಡಿದರು.
ಬಾಲಿವುಡ್ ನಟಿ ವಿದ್ಯಾಬಾಲನ್ ಅವರ ನಟನೆಯನ್ನು ಪರಿಗಣಿಸಿ ವಿಶೇಷ ಪುರಸ್ಕಾರವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಯಿತು. 'ಲತಾ ಮಂಗೇಶ್ಕರ್ ಅವರ ದನಿ ದೈವಿಕವಾದುದು. ನಟನೆಗೆ ಹೊಸದಾಗಿ ಬಂದ ಆರಂಭದಲ್ಲಿ ನಾನು ಲತಾರ ಸಂಗೀತ ಕಾರ್ಯಕ್ರಮಗಳಿಗನ್ನು ನೋಡುತ್ತಿದ್ದೆ. ಅವರು ನನಗಾಗಿ ಸಾರಿ ಕೊಟ್ಟು ಕಳಿಸಿದ್ದರು. ಅದು ನನ್ನ ಸೌಭಾಗ್ಯ' ಎಂದು ವಿದ್ಯಾಬಾಲನ್ ಅವರು ಲತಾ ಮಂಗೇಶ್ಕರ್ ಅವರನ್ನು ಸ್ಮರಿಸಿಕೊಂಡರು.