ಕಣ್ಣೂರು: ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಶಾರುಖ್ ಸೈಫಿಯೊಂದಿಗೆ ಕೇರಳ ಪೋಲೀಸರು ಗುರುತಿನ ಪರೇಡ್ ನಡೆಸಿದರು.
ಪೋಲೀಸ್ ಶಿಬಿರದಲ್ಲಿ ಪರೇಡ್ ನಡೆಸಲಾಗಿದೆ. ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಹಾಗೂ ಐಜಿ ನೀರಜ್ ಕುಮಾರ್ ಶಿಬಿರಕ್ಕೆ ಆಗಮಿಸಿದ್ದರು. ಕಳೆದ ಕೆಲವು ದಿನಗಳಲ್ಲಿ ಪ್ರಕರಣದ ಸಾಕ್ಷಿಗಳ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ.
ಬಳಿಕ ಇಂದು ಮತ್ತೆ ಶಾರುಖ್ ಸೈಫಿಯನ್ನು ಸಾಕ್ಷ್ಯಕ್ಕಾಗಿ ಕರೆದೊಯ್ಯಲಾಯಿತು. ಶೋರ್ನೂರು ಮತ್ತು ಎಲತ್ತೂರಿನಲ್ಲಿ ಸಾಕ್ಷ್ಯ ಸಂಗ್ರಹಿಸಲಾಯಿತು. ಇಂದು ಮಧ್ಯಾಹ್ನದ ನಂತರ ಸಾಕ್ಷ್ಯಾಧಾರಗಳನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಶಾರುಖ್ ಕೆಳಗಿಳಿದ ಶೋರ್ನೂರ್ ರೈಲು ನಿಲ್ದಾಣ ಮತ್ತು ಪೆಟ್ರೋಲ್ ಖರೀದಿಸಿದ ಪೆಟ್ರೋಲ್ ಬಂಕ್‍ನಲ್ಲಿ ಸಾಕ್ಷಿ ತೆಗೆದುಕೊಳ್ಳಲಾಯಿತು.
ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಎಟಿಎಸ್ ಪ್ರತಿನಿಧಿಗಳು ಶಾರುಖ್ ಬಗ್ಗೆ ಮಾಹಿತಿ ಸಂಗ್ರಹಿಸಲು ಕೋಝಿಕ್ಕೋಡ್‍ಗೆ ತೆರಳುತ್ತಿದ್ದಾರೆ. ಘಟನೆ ನಡೆದ ಎಲತ್ತೂರು ಠಾಣೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಶಾರುಖ್ ವಿಶೇಷ ತನಿಖಾ ತಂಡದ ವಶದಲ್ಲಿರುವುದರಿಂದ ಇತರ ತನಿಖಾ ಸಂಸ್ಥೆಗಳಿಗೆ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ.
ಇದೇ ವೇಳೆ ಕೇರಳ ಪೆÇಲೀಸರ ನೇತೃತ್ವದಲ್ಲಿ, ಶಾರುಖ್ ಬಗ್ಗೆ ವಿವರಗಳಿಗಾಗಿ ನೋಯಿಡಾ, ಹರಿಯಾಣದಲ್ಲಿ ಹುಡುಕಾಟ ನಡೆಸಿದ್ದರು. ಶಾರುಖ್ ನ ಪೋನ್ ಪರಿಶೀಲಿಸುವುದರಿಂದ ಹಿಡಿದು ಆನ್‍ಲೈನ್ ಸಂಬಂಧಗಳ ಮೇಲೆ ಕೇಂದ್ರೀಕರಿಸಿ ತನಿಖೆ ನಡೆಸಲಾಯಿತು. ದಾಳಿಯ ಕೆಲವು ದಿನಗಳ ಮೊದಲು ಶಾರುಖ್ ಮನೆಯಿಂದ ತೆರಳಿದ್ದ. ದೆಹಲಿಗೆ ಹಿಂತಿರುಗುವ ಉದ್ದೇಶವಿದ್ದಿರಲಿಲ್ಲ ಎಂದು ಪೋಲೀಸರು ತೀರ್ಮಾನಿಸಿದ್ದಾರೆ.
ರೈಲಿನೊಳಗೆ ಶಾರುಖ್ ಸೈಫಿ ಸಹಾಯ ಪಡೆದಿರುವ ಬಗ್ಗೆ ಪೋಲೀಸರ ಅನುಮಾನ ಬಲವಾಗುತ್ತಿದೆ. ದಾಳಿಯ ವೇಳೆ ಆತ ಕೆಂಪು ಅಂಗಿ ಧರಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಕಣ್ಣೂರಿಗೆ ಬಂದಿಳಿದಾಗ ಬಟ್ಟೆಯೇ ಬೇರೆಯಾಗಿತ್ತು. ರೈಲಿನೊಳಗೆ ತಾನಾಗಿಯೇ ಬಟ್ಟೆ ಬದಲಾಯಿಸಿದ್ದಾನೋ ಅಥವಾ ಯಾರೋ ಕೊಟ್ಟಿದ್ದಾರೋ ಎಂಬ ಶಂಕೆಯೂ ವ್ಯಕ್ತವಾಗಿದೆ.
ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಪೋಲೀಸ್ ಶಿಬಿರದಲ್ಲಿ ಶಾರುಖ್ ಸೈಫಿ ಜೊತೆ ಗುರುತಿನ ಪರೇಡ್: ಉನ್ನತ ಪೋಲೀಸ್ ತಂಡ ನಿಗಾ
0
ಏಪ್ರಿಲ್ 14, 2023