ಕಾಸರಗೋಡು: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್(ಕೆಪಿಎಸ್‍ಟಿಎ) ರಾಜ್ಯಾದ್ಯಂತ ನಡೆಸುವ ಎಲ್‍ಎಸ್‍ಎಸ್ ಮತ್ತು ಯುಎಸ್‍ಎಸ್ ಜಿಲ್ಲಾ ಮಟ್ಟದ ಮಾದರಿ ಪರೀಕ್ಷಾ ತರಬೇತಿಯ ಉದ್ಘಾಟನೆ ನಾಯನ್‍ಮರ್‍ಮೂಲೆ ಟಿಐಎಚ್‍ಎಸ್‍ಎಸ್‍ನಲ್ಲಿ ಜರುಗಿತು.
ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಸಿ.ಕೆ. ವಾಸು ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಎನ್.ನಂದಿಕೇಶನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾಧ್ಯಕ್ಷ ಪ್ರಶಾಂತ ಕಾನತ್ತೂರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲೆಯ ಎಲ್ಲಾ ಉಪಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ ನಡೆದ ಮಾದರಿ ಪರೀಕ್ಷೆಯಲ್ಲಿ ಸುಮಾರು 6000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ. ಮಾದರಿ ಪರೀಕ್ಷೆಗೆ ಹಾಜರಾದ ಪಾಲಕರು ಹಾಗೂ ಶಿಕ್ಷಕರಿಗೆ ನಡೆದ ತರಗತಿಯನ್ನು ರಾಜ್ಯ ಕಾರ್ಯದರ್ಶಿ ಗಿರಿಜಾ ಉದ್ಘಾಟಿಸಿದರು.
ಪಿ.ಎಸ್.ಸಂತೋಷ್ ಕುಮಾರ್ ತರಗತಿ ನಡೆಸಿದರು. ಎ.ವಿ.ಗಿರೀಶನ್ ಕೆ.ಅನಿಲ್ಕುಮಾರ್, ಜಿ.ಕೆ.ಗಿರೀಶ್, ಪಿ.ಟಿ. ಬೆನ್ನಿ, ವಾಸುದೇವನ್ ನಂಬೂದಿದಿರಿ, ರಾಜೇಶ ಕುಮಾರ್, ಕೆ. ಸಂಧ್ಯಾ, ಸತೀಶನ್, ಕೆ.ಪಿ. ಮುಹಮ್ಮದ್ ಅಲಿ, ನಾರಾಯಣನ್ ಪಿ.ಎನ್., ನಸೀಬಾ, ಎ. ಶೋಭನಾ, ಪಿ. ಹರಿಪ್ರಸಾದ್, ರಜಿನಿ ಕೆ.ಜೋಸೆಫ್ ಉಪಸ್ಥಿತರಿದ್ದರು.. ರಾಜ್ಯ ಸಮಿತಿ ಸದಸ್ಯ ಅಶೋಕನ್ ಕೋಡೋತ್ ಸ್ವಾಗತಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಎ. ಜಯದೇವ ವಂದಿಸಿದರು.
ಎಲ್.ಎಸ್.ಎಸ್, ಯುಎಸ್.ಎಸ್ ಮಾದರಿ ಪರೀಕ್ಷಾ ತರಬೇತಿ ಉದ್ಘಾಟನೆ
0
ಏಪ್ರಿಲ್ 20, 2023