ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ಕುಟುಂಬಶ್ರೀ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕ್ಲೀನ್ ಬದಿಯಡ್ಕ ಯೋಜನೆಗೆ ಚಾಲನೆ ನೀಡಲಾಗಿದೆ.
ಬದಿಯಡ್ಕ ಗುರುಸದನದಲ್ಲಿ ಶನಿವಾರ ನಡೆದ ಸಭೆಯನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಉದ್ಘಾಟಿಸಿದರು. ಸದಸ್ಯ ಶ್ಯಾಮಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಜಯಶ್ರೀ, ಹಮೀದ್, ಶಂಕರ್, ಶುಭಲತಾ, ಸಿಡಿಎಸ್ ಅಧ್ಯಕ್ಷೆ ಅನಿತಾ ಕ್ರಾಸ್ತಾ, ಕಾರ್ಯದರ್ಶಿ ಸಿ.ರಾಜೇಂದ್ರನ್, ಸಹಾಯಕ ಕಾರ್ಯದರ್ಶಿ ಪುಷ್ಪರಾಜನ್, ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಕ್ಲೀನ್ ಬದಿಯಡ್ಕ ಯೋಜನೆ ಆರಂಭ: ಸಭೆ
0
ಏಪ್ರಿಲ್ 02, 2023