ಬದಿಯಡ್ಕ: ಬದಿಯಡ್ಕದ ಜಿ.ಎಸ್.ಬಿ ಸಮಾಜದ ಶ್ರೀರಾಮ ಭಜನಾ ಮಂದಿರದಲ್ಲಿ ಮಾ.30ರಂದು ಶ್ರೀರಾಮ ನವಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಪರಿವಾರ ದೇವರಿಗೆ ವಿಶೇಷ ಹೂವಿನ ಅಲಂಕಾರ, ಭಜನೆ, ರಾಮರಕ್ಷಾ ಸ್ತೋತ್ರ ಪಠಣ ನಡೆಯಿತು. ಪಾನಕ ಪನಿವಾರ ಪೂಜೆಯನ್ನು ಪುರೋಹಿತರಾದ ವೇದಮೂರ್ತಿ ದಿನೇಶ ಭಟ್ ನೆರವೇರಿಸಿದರು.
ಬದಿಯಡ್ಕದಲ್ಲಿ ರಾಮನವಮಿ ಆಚರಣೆ
0
ಏಪ್ರಿಲ್ 01, 2023