ಬೇಸಿಗೆಯಲ್ಲಿ ಫುಡ್ ಪಾಯಿಸನ್ ಸಮಸ್ಯೆ ತುಂಬಾನೇ ಅಧಿಕ. ಹೊರಗಡೆ ಹೋದಾಗ ಆಹಾರದ ಶುಚಿತ್ವ ಕಡೆಗೆ ಗಮನ ಹರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ತುಂಬಾ ಸೆಕೆ ಇರುವುದರಿಂದ ಐಸ್‌ಕ್ರೀಮ್, ಜ್ಯೂಸ್ ಅಂತ ಸೇವಿಸುತ್ತೇವೆ, ಆದರೆ ಇದಕ್ಕೆ ಬಳಸುವ ನೀರು ಶುದ್ಧವಾಗಿಲ್ಲದಿದ್ದರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ.
ಬೇಸಿಗೆಯಲ್ಲಿ ಫುಡ್ ಪಾಯಿಸನ್ ಸರ್ವೇ ಸಾಮಾನ್ಯವಾಗಲು ಕಾರಣವೆಂದರೆ ಶುಷ್ಕ ವಾತಾವರಣಕ್ಕೆ ಬ್ಯಾಕ್ಟಿರಿಯಾಗಳು ಬೆಳೆಯುತ್ತದೆ. ಅಲ್ಲದೆ ಹೊರಗಡೆ ಆಹಾರಗಳನ್ನು ಸೇವಿಸಿದಾಗ ನಾನ್‌ವೆಜ್‌ಗಳು ಅಂದರೆ ಗ್ರಿಲ್ಡ್, ತಂದೂರಿ ಈ ಬಗೆಯ ಸೇವಿಸುವಾಗ ತುಂಬಾನೇ ಎಚ್ಚರವಹಿಸಬೇಕು, ಸರಿಯಾಗಿ ಬೆಂದಿಲ್ಲ ಎಂದಾದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು.
ತಿಂದ ಆಹಾರದಿಂದ ಫುಡ್ ಪಾಯಿಸನ್ ಆಗಿದೆ ಎಂದು ತಿಳಿಯುವುದು ಹೇಗೆ?
* ಆಹಾರ ಸೇವಿಸಿದ ಬಳಿಕ ವಾಂತಿ-ಬೇಧಿ ಉಂಟಾಗುವುದು
* ಹೊಟ್ಟೆ ನೋವು ಉಂಟಾಗುವುದು
* ತುಂಬಾನೇ ಸುಸ್ತು ಉಂಟಾಗುವುದು.
ಎರಡರಿಮದ ಮೂರು ಬಾರಿ ವಾಂತಿಯಾಯಿತು ಎಂದಾದರೆ ತಡ ಮಾಡಬೇಡಿ, ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ.
ಫುಡ್ ಪಾಯಿಸನ್ ಆಗುವುದನ್ನು ತಡೆಗಟ್ಟುವುದು ಹೇಗೆ?
* ಹೊರಗಿನ ಆಹಾರ ಸೇವಿಸಲು ಹೋಗಬೇಡಿ, ಒಂದು ವೇಳೆ ಸೇವಿಸುವುದಾದರೂ ಶುಚಿತ್ವ ಇರುವ ಕಡೆ ಮಾತ್ರ ಸೇವಿಸಿ.
* ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ
* ಹೊರಗಡೆ ಬಿಸಿಲಿನಲ್ಲಿ ಕೂತು ಆಹಾರ ಸೇವಿಸಬೇಡಿ
* ಆಹಾರ ತಯಾರಿಸಲು ಶುದ್ಧವಾದ ನೀರನ್ನು ಬಳಸಿರಬೇಕು.
* ಹಣ್ಣು-ತರಕಾರಿಗಳನ್ನು ಅಷ್ಟೇ ಚೆನ್ನಾಗಿ ತೊಳೆದು ತಿನ್ನಿ. ಕೊಳೆತ ತರಕಾರಿ, ಹಣ್ಣುಗಳನ್ನು ಬಳಸಬೇಡಿ.
ಫುಡ್ ಪಾಯಿಸನ್ ಆದಾಗ ಏನು ಮಾಡಬೇಕು?
* ಫುಡ್ ಪಾಯಿಸನ್ ಆದಾಗ ಸಾಕಷ್ಟು ನೀರು ಕುಡಿಯಬೇಕು.
* ವಾಂತಿ-ಬೇಧಿಯಾಗುತ್ತಿದೆ ಎಂದು ನೀರು ಕುಡಿಯುವುದು ಕಡಿಮೆ ಮಾಡಬೇಡಿ. ತೆಳು ಗಂಜಿನೀರು, ನೀರು, ಎಳನೀರು, ಪುದೀನಾ ಟೀ, ಬ್ಲ್ಯಾಕ್ ಟೀ ಇವುಗಳನ್ನು ಸೇವಿಸಿ.
* ORS ಸೇವಿಸಿ.
ಫುಡ್ ಪಾಯಿಸನ್ ಉಂಟಾದರೆ ಮನೆಮದ್ದು
* ಆಪಲ್ ಸಿಡರ್ ವಿನೆಗರ್: ಒಂದು ಕಪ್ ಬಿಸಿ ನೀರಿಗೆ 2-3 ಚಮಚ ಆಪಲ್ ಸಿಡರ್ ವಿನೆಗರ್ ಸೇರಿಸಿ ಆಹಾರಕ್ಕಿಂತ ಮುಂಚೆ ಸೇವಿಸುವುದರಿಂದ ಅಸಿಡಿಟಿ, ಫುಡ್ ಪಾಯಿಸನ್ ಇವುಗಳ ಪರಿಣಾಮ ಕಡಿಮೆ ಮಾಡುವುದು.
* ಶುಂಠಿ ಪುಡಿ: ಒಂದು ಲೋಟ ಬಿಸಿ ನೀರಿಗೆ 1/2 ಚಮಚ ಶುಂಠಿ ಪುಡಿ ಹಾಗೂ ಜೇನು ಸೇರಿಸಿ ಕುಡಿದರೆ ಒಳ್ಳೆಯದು.
* ಮೊಸರು ಮತ್ತು ಮೆಂತೆ: ಒಂದು ಕಪ್ ಮೊಸರಿಗೆ ಒಂದು ಚಮಚ ಮೆಂತೆ ಹಾಕಿ ಸೇವಿಸಿ. ಮೆಂತೆಯನ್ನು ಜಗಿಯಬೇಡಿ, ಹಾಗೇ ನುಂಗಿ.
* ನಿಂಬೆರಸ: ಒಂದು ಲೋಟ ಹದ ಬಿಸಿ ನೀರಿಗೆ ನಿಂಬೆರಸ, ಉಪ್ಪು, ಸಕ್ಕರೆ ಬೆರೆಸಿ ಮಿಕ್ಸ್ ಮಾಡಿ ಕುಡಿದರೆ ಬೇಧಿ ಬೇಗನೆ ನಿಲ್ಲುತ್ತದೆ.
* ತಣ್ಣನೆಯ ಹಾಲು: ತಣ್ಣನೆಯ ಹಾಲು ಅಸಿಡಿಟಿ ಕಡಿಮೆ ಮಾಡುವುದು. ಅಸಿಡಿಟಿ ಅಥವಾ ಫುಡ್ ಪಾಯಿಸನ್ ಉಂಟಾದಾಗ ತಣ್ಣನೆಯ ಹಾಲು ಒಂದು ಲೋಟ ಕುಡಿದಾಗ ಹೊಟ್ಟೆ ನೋವು ಸ್ವಲ್ಪ ಕಡಿಮೆಯಾಗುವುದು.
* ಜೀರಿಗೆ ನೀರು: ನೀರಿಗೆ ಜೀರಿಗೆ, ಇಂಗು, ಉಪ್ಪು ಸೇರಿಸಿ 2-3 ಬಾರಿ ಕುಡಿದರೆ ಸ್ವಲ್ಪ ಸಮಧಾನ ಅನಿಸುವುದು.
ಒಂದು ದಿನವಾದರೂ ಬೇಧಿ ಕಡಿಮೆಯಾಗದಿದ್ದರೆ
* ಸಾಕಷ್ಟು ನೀರು ಕುಡಿಯಿರಿ, ವೈದ್ಯರಿಗೆ ತೋರಿಸಿ ಔಷಧ ತೆಗೆದುಕೊಳ್ಳಿ.
* ಕೈಗಳನ್ನು ಸೋಪು ಹಾಕಿ ಆಗಾಗ ತೊಳೆಯಬೇಕು.
* ಕಿಚನ್‌ನಲ್ಲಿ ಶುಚಿತ್ವ ಕಾಪಾಡಿ.
* ಡೀಪ್ ಫ್ರೀಝರ್‌ನಲ್ಲಿ ಆಹಾರವನ್ನು ಇಡಬೇಡಿ
* ಚೇತರಿಸಿಕೊಳ್ಳುವವರಿಗೆ ವಿಶ್ರಾಂತಿ, ಒಳ್ಳೆಯ ನಿದ್ದೆ ಅವಶ್ಯಕ
ಏನು ಮಾಡಬಾರದು?
* ಘನ ಆಹಾರ ಸೇವಿಸಬೇಡಿ
* ಬೀದಿ ಬದಿಯ ಆಹಾರ ಸೇವಿಸಬೇಡಿ
* ಫುಡ್ ಪಾಯಿಸನ್ ಆದರೆ ಸ್ವಲ್ಪ ದಿನಗಳವರೆಗೆ ಮಸಾಲೆ ಇರುವ, ಕರಿದ ಆಹಾರ ಸೇವಿಸಬೇಡಿ
* ಮಾಂಸಾಹಾರ ಸೇವಿಸಬೇಡಿ
* ಮದ್ಯಪಾನ, ಧೂಮಪಾನ ಮಾಡಿದಿರಿ.
ಬೇಸಿಗೆಯಲ್ಲಿ ನೀರನ್ನು ಕುದಿಸಿ ಆರಿಸಿ ಕುಡಿಯಿರಿ. ಮಕ್ಕಳಿಗೂ ಅಷ್ಟೇ ಹೊರಗಡೆಯ ಆಹಾರ ಕೊಡಿಸಬೇಡಿ. ಸಾಧ್ಯವಾದರೆ ಪ್ರಯಾಣ ಮಾಡುವಾಗ ಆಹಾರ ಕೊಂಡೊಯ್ಯಿರಿ, ಇಲ್ಲದಿದ್ದರೆ ಶುಚಿತ್ವಕ್ಕೆ ಮಹತ್ವ ಕಡೆ ಮಾತ್ರ ಆಹಾರ ಸೇವಿಸಿ.