ನೀವು
ಬಳಸಿದ
ಪರ್‌ಫ್ಯೂಮ್
ತುಂಬಾ
ಸಮಯ
ಇರುತ್ತಿಲ್ಲವೇ?
ತುಂಬಾ
ಹೊತ್ತು
ಇರಬೇಕೆಂದು
ತುಂಬಾ
ಹಾಕಿದರೆ
ಪರ್ಫ್ಯೂಮ್
ವಾಸನೆಯಿಂದ
ನಿಮ್ಮ
ಸಮೀಪ
ಇರುವವರಿಗೆ
ತಲೆನೋವು
ಬರಬಹುದು,
ಆದ್ದರಿಂದ
ಪರ್‌ಫ್ಯೂಮ್
ಬಳಸುವ
ಟ್ರಿಕ್ಸ್
ಗೊತ್ತಿದ್ದರೆ
ಸುಗಂಧವಾಸನೆ
ತುಂಬಾ
ಸಮಯ
ಇರುತ್ತದೆ.
ಫರ್‌ಫ್ಯೂಮ್ ನಮ್ಮ ದೇಹದ ದುರ್ವಾಸನೆ ತಡೆಯುವುದರ ಜೊತೆಗೆ ನಮ್ಮ ಆತ್ಮವಿಶ್ವಾಸ
ಹೆಚ್ಚಿಸುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಏಕೆಂದರೆ ನಮ್ಮ ಮೈಯಿಂದ ಬೆವರ ದುರ್ವಾಸನೆ
ಬೀರುತ್ತಿದ್ದರೆ ನಮಗೆ ಬೇರೆಯವರ ಸಮೀಪ ನಿಂತು ಮಾತನಾಡಲು ಒಂಥರಾ ಮುಜುಗರವಾಗುತ್ತದೆ.
ಆದರೆ ಈ ಪರ್‌ಫ್ಯೂಮ್ ತುಂಬಾ ಸಮಯ ಸುವಾಸನೆ ಬೀರುವಂತೆ ಹಾಕುವುದು ಹೇಗೆ ಎಂದು
ಅನೇಕರಿಗೆ ಗೊತ್ತಿರುವುದಿಲ್ಲ. ಪರ್‌ಫ್ಯೂಮ್ ಸುಗಂಧ ವಾಸನೆ ತುಂಬಾ ಸಮಯ ಇರಲು
ಪರ್ಫ್ಯೂಮ್ ಹೇಗೆ ಬಳಸಬೇಕು ಎಂದು ನೋಡೋಣ:
ಕೂದಲಿಗೆಈ ಟ್ರಿಕ್ಸ್ ಬಹುತೇಕ ಜನರಿಗೆ ಗೊತ್ತೇ ಇರುವುದಿಲ್ಲ. ಹೌದು ಪರ್‌ಫ್ಯೂಮ್ ಅನ್ನು
ಕೂದಲಿಗೆ ಸ್ವಲ್ಪ ಹಾಕಿದರೆ ತುಂಬಾ ಒಳ್ಳೆಯದು. ಆದರೆ ಪರ್‌ಫ್ಯೂಮ್ ಅನ್ನು ನಿಮ್ಮ
ಕೂದಲಿನ ಬುಡಕ್ಕೆ ಹಾಕಬೇಡಿ. ನಿಮ್ಮ ಸ್ಪ್ರೇಯನ್ನು 10 ಇಂಚು ದೂರ ಹಿಡಿದು ಮೆಲ್ಲನೆ
ಸ್ಪ್ರೇ ಮಾಡಿ. ಗಿಡ್ಡ ಕೂದಲು ಇರುವವರು ಈ ಟ್ರಿಕ್ಸ್ ಬಳಸಬೇಡಿ, ಕೂದಲಿನ ಬುಡಕ್ಕೆ
ತಾಗಿದರೆ ಕೂದಲಿಗೆ ಹಾನಿಯಾಗುವುದು. ಉದ್ದ ಕೂದಲು ಇರುವವರು ಈ ಟ್ರಿಕ್ಸ್ ಬಳಸಬಹುದು.
ಕಿವಿ ಹಿಂದೆ
ಕಿವಿಯ ಹಿಂದೆ ಹಚ್ಚುವುದರಿಂದ ಬೇಗನೆ ಆವಿಯಾಗುವುದಿಲ್ಲ. ಇದರಿಂದ ಸುವಾಸನೆ ತುಂಬಾ
ಹೊತ್ತು ಇರುತ್ತದೆ. ನೀವು ಕಿವಿ ಹಿಂದೆ ಪರ್ಫ್ಯೂಮ್ ಹಾಕಿದರೆ ಒಂದು ದಿನವಾದರೂ ಅದರ
ಸುವಾಸನೆ ಹಾಗೇ ಇರಲಿದೆ.
ಪಲ್ಸ್ ಪಾಯಿಂಟ್ ಬಳಿ
ನೀವು ನಿಮ್ಮ ಪಲ್ಸ್ ಪಾಯಿಂಟ್ ಬಳಿ ಪರ್‌ಫ್ಯೂಮ್ ಹಾಕಿ, ಪಲ್ಸ್ ಪಾಯಿಂಟ್
ಅಂದ್ರೆ ನೀವು ವಾಚು ಕಟ್ಟುತ್ತೀರಾ ಅಲ್ಲಾ, ಆ ಭಾಗಕ್ಕೆ ಸ್ವಲ್ಪ ಹಾಕಿ, ಹೀಗೆ ಹಾಕಿದರೆ
ಸುವಾಸನೆ ತುಂಬಾ ಸಮಯ ಇರುತ್ತದೆ.
ಮೊಣಕೈಯೊಳಗೆ
ನೀವು
ಮೊಣಕೈಯೊಳಗೆ
ಸ್ವಲ್ಪ
ಸುಗಂಧ
ದ್ರವ್ಯ
ಹಾಕಿ,
ಈ
ಸುವಾಸನೆ
ತುಂಬಾ
ಸಮಯ
ಹಾಗೇ
ಇರುತ್ತದೆ.
ಆದ್ದರಿಂದ
ನೀವು
ಇನ್ನು
ಮುಂದೆ
ಪರ್‌ಫ್ಯೂಮ್
ಬಳಸುವಾಗ
ಮೊಣಕೈಗೂ
ಬಳಸಿ.
ಮೊಣಕಾಲಿಗೆ
ಹಾಕಿ
ನೀವು
ಸ್ವಲ್ಪ
ಸುಗಂಧದ್ರವ್ಯವನ್ನು
ನಿಮ್ಮ
ಮೊಣಕಾಲಿಗೆ
ಹಾಕಿ.
ನೀವು
ಈ
ಭಾಗಕ್ಕೆ
ಸುಗಂಧದ್ರವ್ಯ
ಹಾಕಿದಾಗ
ಸುವಾಸನೆ
ತುಂಬಾ
ಸಮಯ
ಇರುತ್ತದೆ.
ನೆಕ್ಟ್ಸ್
ಟೈಮ್
ನೀವು
ಸುಗಂಧದ್ರವ್ಯ
ಬಳಸುವಾಗ
ಈ
ಟ್ರಿಕ್ಸ್
ಬಳಸಿ
ನೋಡಿ
ದಿನಪೂರ್ತಿ
ಸುವಾಸನೆ
ಬೀರುವುದು.
ಈ
ಟ್ರಿಕ್ಸ್
ಬೇಸಿಗೆಯಲ್ಲಂತೂ
ತುಂಬಾನೇ
ಸಹಕಾರಿಯಾಗಿದೆ.
ಪರ್‌ಫ್ಯೂಮ್
ಬಳಸುವಾಗ
ಈ
ತಪ್ಪು
ಮಾಡದಿರಿ:
*
ತುಂಬಾ
ಸ್ಟ್ರಾಂಗ್
ಪರ್‌ಫ್ಯೂಮ್
ಬಳಸಬೇಡಿ,
ಯಾವಾಗಲೂ
ಮೈಲ್ಡ್
ಆಗಿ
ಬಳಸಿ
*
ಬಟ್ಟೆ
ಮೇಲೆ
ಸುಮ್ಮನೆ
ಸ್ಪ್ರೇ
ಮಾಡಬೇಡಿ