ಪೆರ್ಲ: ಗ್ರಾಮ ದೇವಾಲಯವೆಂದೇ ಖ್ಯಾತಿ ಪಡೆದಿರುವ ಪೆರ್ಲ ಸನಿಹದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಉದ್ಯಮಿ, ಪಡ್ಡಂಬೈಲುಗುತ್ತು ತಾರಾನಾಥ ರೈ ಆಯ್ಕೆಯಾಗಿದ್ದಾರೆ. ಕಾಟುಕುಕ್ಕೆ ಪಡ್ಡಂಬೈಲ್ ಗುತ್ತುವಿನ ಸದಸ್ಯರಾಗಿರುವ ಇವರು ಪೆರ್ಲದಲ್ಲಿ ಟಯರ್ ಇಂಡಸ್ಟ್ರೀಸ್ ನಡೆಸುತ್ತಿದ್ದಾರೆ. ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿರುವ ಇವರು ಕಾಟುಕುಕ್ಕೆ ದೇವಸ್ಥಾನದಲ್ಲಿ ಈ ಹಿಂದೆ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದಾರೆ. ಆಡಳಿತ ಸಮಿತಿ ಸದಸ್ಯರಾಗಿ ರಘುರಾಮ ರೈ ಕಟ್ಟತ್ತಾಡೆ, ಸುಧಾಕರ ಮಣಿಯಾಣಿ ಕಲ್ಲಗದ್ದೆ, ಚನಿಯಪ್ಪ ನಾಯ್ಕ, ರಿತೇಶ್‍ಕಿರಣ್ ಕಾಟುಕುಕ್ಕೆ ಆಯ್ಕೆಯಾಗಿದ್ದಾರೆ.
ಕಾಟುಕುಕ್ಕೆ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ತಾರಾನಾಥ ರೈ ಆಯ್ಕೆ
0
ಏಪ್ರಿಲ್ 04, 2023