ಕೋಝಿಕ್ಕೋಡ್: ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆಯ ಶಂಕಿತ ಆರೋಪಿಯ ರೇಖಾಚಿತ್ರ ಸಿದ್ಧಪಡಿಸಲಾಗಿದೆ.
ಏಲತ್ತೂರು ಪೊಲೀಸ್ ಠಾಣೆಯಲ್ಲಿ ಸ್ಕೆಚ್ ಸಿದ್ಧಪಡಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸಿದ ರಾಝಿಕ್ ಎಂಬುವರಿಂದ ಬಂದ ಮಾಹಿತಿ ಆಧರಿಸಿ ಸ್ಕೆಚ್ ಸಿದ್ಧಪಡಿಸಲಾಗಿದೆ. ಪ್ರಯಾಣದ ವೇಳೆ ರಾಝಿಕ್ ಎದುರಿನ ಸೀಟಿನಲ್ಲಿ ದಾಳಿಕೋರ ಕುಳಿತಿದ್ದ ಕಾರಣ ರಾಝಿಕ್ ನ ಸಹಾಯದಿಂದ ಚಿತ್ರ ಬಿಡಿಸಲಾಗಿದೆ.
ಇದೇ ವೇಳೆ ಕಣ್ಣೂರಿಗೆ ತೆರಳುತ್ತಿದ್ದ ಡಿಜಿಪಿ ಅನಿಲ್ ಕಾಂತ್ ತನಿಖೆಯ ಪ್ರಗತಿ ಕುರಿತು ಮಾತನಾಡಿದರು. ಘಟನೆಯಲ್ಲಿ ಕೆಲ ಮಹತ್ವದ ಸುಳಿವು ಸಿಕ್ಕಿದೆ. ವೈಜ್ಞಾನಿಕ ತನಿಖೆ ಪ್ರಗತಿಯಲ್ಲಿದೆ. ಆರೋಪಿಳ ಸುಳಿವು ಶೀಘ್ರ ತಲುಪಲಿದೆ. ಎಸ್‍ಐ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ನೇಮಿಸಲಾಗುವುದು ಎಂದು ತಿಳಿಸಿದರು. ಕಣ್ಣೂರು ತಲುಪಿದ ಬಳಿಕ ಸದ್ಯ ತನಿಖೆ ನಡೆಸುತ್ತಿರುವ ಅಧಿಕಾರಿಗಳೊಂದಿಗೆ ಮಾತನಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದರ ಹಿಂದೆ ಷಡ್ಯಂತ್ರವಿದೆಯೇ ಅxವಾ ಇತರ ಸಂಬಂಧವಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಕಣ್ಣೂರಿಗೆ ತೆರಳಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ದಾಳಿಕೋರ ಬೇರೆ ರಾಜ್ಯದವರು ಎಂಬ ಸುಳಿವು ಸಿಕ್ಕಿದೆ. ಆದರೆ ಇದು ಸ್ಪಷ್ಟವಾಗಿಲ್ಲ. ಘಟನೆ ಸಂಬಂಧ ರೈಲ್ವೆ ಪೆÇಲೀಸರು ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಮುಖ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ ಯತ್ನ ಮತ್ತು ಹಲ್ಲೆ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 112 ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಆರೋಪಿಯ ದೇಹ ಸ್ಪಷ್ಟವಾಗಿ ಕಾಣುವ ವಿಡಿಯೋ ಕೂಡ ಲಭ್ಯವಾಗಿದೆ ಎಂದು ಸೂಚಿಸಲಾಗಿದೆ. ಗೃಹ ಸಚಿವಾಲಯದ ಸೂಚನೆಯಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ ಘಟನೆಯ ಬಗ್ಗೆ ತನಿಖೆ ನಡೆಸಲಿದೆ.
ನಿನ್ನೆ ರಾತ್ರಿ 9.30 ರ ಸುಮಾರಿಗೆ ಅಲಪ್ಪುಳ-ಕಣ್ಣೂರು ರೈಲು ಸಂಚಾರದ ವೇಳೆ ಘಟನೆ ನಡೆದಿತ್ತು.
ರೈಲಲ್ಲಿ ಪ್ರಯಾಣಿಕರಿಗೆ ಬೆಂಕಿಹಚ್ಚಿದ ಪ್ರಕರಣ: ದಾಳಿಕೋರನ ರೇಖಾಚಿತ್ರ ಸಿದ್ಧ: ಆರೋಪಿಯನ್ನು ಬಂಧಿಸಲು ವಿಶೇಷ ತನಿಖಾ ತಂಡ ನೇಮಿಸಲು ತೀರ್ಮಾನ: ಡಿಜಿಪಿ ಅನಿಲ್ ಕಾಂತ್
0
ಏಪ್ರಿಲ್ 03, 2023