ತಿರುವನಂತಪುರ: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿ, ಕೆಲ ದಿನಗಳ ಕಾಲ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇರಳದ ಇನ್ಸ್ಟಾಗ್ರಾಂ ಹಾಗೂ ಸೆಲೆಬ್ರಿಟಿ ಹಾಗೂ ರೀಲ್ಸ್ ಸ್ಟಾರ್ ವಿನೀತ್, ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾನೆ.
ಹಾಡಹಗಲಲ್ಲೇ ಪೆಟ್ರೋಲ್ ಪಂಪ್ ಮ್ಯಾನೇಜರ್ನಿಂದ ಬರೋಬ್ಬರಿ 2.5 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ವಿನೀತ್ (26) ಮತ್ತು ಆತನ ಸ್ನೇಹಿತ ಜೀತು (22) ಇಬ್ಬರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಮೀಸೆಕಾರ ವಿನೀತ್
ಅಂದಹಾಗೆ ವಿನೀತ್ ಸಾಮಾಜಿಕ ಜಾಲತಾಣದಲ್ಲಿ
ಮೀಸೆಕಾರ ವಿನೀತ್ ಎಂದು ಖ್ಯಾತಿ ಪಡೆದಿದ್ದಾನೆ. ಬಂಧಿತ ವಿನೀತ್ ಮತ್ತು ಜೀತು
ವೆಲಾಲ್ಲೂರ್ ನಿವಾಸಿಗಳು. ಮಗಳಪುರಂ ಪೊಲೀಸರು ಬಂಧಿದ್ದಾರೆ. ವಿನೀತ್ ಮೇಲೆ ಸುಮಾರು
10 ಕಳ್ಳತನ ಪ್ರಕರಣಗಳಿವೆ. ಈ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಥಾಂಪನೂರ್ ಪೊಲೀಸರಿಂದ
ಬಂಧನವಾಗಿದ್ದ.