ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ನಾರಿಚಿನ್ನಾರಿ ವತಿಯಿಂದ ರಂಗ ವಸಂತ ಕಾರ್ಯಕ್ರಮ ಏ. 23ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ. ನಾರಿ ಚಿನ್ನಾರಿಯ ನಾಲ್ಕನೇ ಸರಣಿ ಕಾರ್ಯಕ್ರಮ ಇದಾಗಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಚಿತ್ರ ನಟಿ, ಕಾಂತಾರ ಚಲನಚಿತ್ರ ಖ್ಯಾತಿಯ ಪ್ರತಿಮಾ ನಾಯಕ್ ಕುಂದಾಪುರ ಸಮಾರಂಭ ಉದ್ಘಾಟಿಸುವರು. ನಾರಿಚಿನ್ನಾರಿ ಗೌರವಾಧ್ಯಕ್ಷೆ ತಾರಾಜಗದೀಶ್ ಅಧ್ಯಕ್ಷತೆ ವಹಿಸುವರು. ಗಮಕಿ, ವಾಗ್ಮಿ ಜಯಶ್ರೀ ಕಾರಂತ್, ನಾಟಿವೈದ್ಯೆ ಯಮುನಾ ಕೆ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗೀತಪ್ರಿಯಾ ಅವರಿಂದ ಕೂಚುಪುಡಿ, ಶ್ಯಾಮಲಾರವಿರಾಜ್ ಕುಂಬಳೆ ಅವರಿಂದ ಕಾವ್ಯಧಾರೆ, ಕು.ಶಾರಿಕಾ ಅವರಿಂದ ಕಥೆ ಹೇಳುವುದು, ಅನ್ವಿತಾ ತಲ್ಪನಾಜೆ ಅವರಿಂದ ಶಾಸ್ತ್ರೀಯ ಸಂಗೀತ, ಸುಮೇಧ ಕಲ್ಲಕಟ್ಟ ಅವರಿಂದ ಭಾವಗೀತೆ, ಸನ್ನಿಧಿ ಪಳ್ಳತ್ತಡ್ಕ ಅವರಿಂದ ಯೋಗ ಪ್ರದರ್ಶನ, ಸರೋಜಿನಿ ಟೀಚರ್ ಅವರಿಂದ ಹರಿಕತೆ, ಬಬಿತಾರವಿಚಂದ್ರ ಅವರಿಂದ ಭಕ್ತಿಗೀತೆ, ಸರ್ವಮಂಗಳ ಅವರಿಂದ ಹಾಸ್ಯಲಹರಿ, ಮೀರಾಹರೀಶ್-ನಳಿನಾಕ್ಷಿ ಅವರಿಂದ ಪ್ರಹಸನ, 'ಮಕ್ಕಳ ಪೋಷಣೆಯಲ್ಲಿ ಹೆತ್ತವರ ಪಾತ್ರ'ಎಂಬ ವಿಷಯದ ಬಗ್ಗೆ ಜಯಲಕ್ಷ್ಮೀ ಕಾರಂತ್ ಅವರಿಂದ ಸಂವಾದ ನಡೆಯಲಿರುವುದು.