ನವದೆಹಲಿ: ವಿಂಗ್ ಕಮಾಂಡರ್ ದೀಪಿಕಾ ಮಿಶ್ರಾ ಅವರು ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ದೀಪಿಕಾ ಅವರದು.
ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಅವರು ಇಲ್ಲಿನ ಸುಬ್ರತೊ ಪಾರ್ಕ್‌ನಲ್ಲಿರುವ ವಾಯುಪಡೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪಿಕಾ ಅವರಿಗೆ 'ವಾಯು ಸೇನಾ ಪದಕ' ಪ್ರದಾನ ಮಾಡಿದರು.