HEALTH TIPS

ಈ ಎಣ್ಣೆಗಳನ್ನು ಮಾತ್ರ ಅಡುಗೆಗೆ ಬಳಸಿ ! ಇಲ್ಲದಿದ್ದರೆ ಹೃದಯಕ್ಕೆ ಆಪತ್ತು

 

ನಾವು ಪ್ರತಿನಿತ್ಯ ಆಹಾರ ತಯಾರು ಮಾಡಬೇಕಾದ ಸಂದರ್ಭದಲ್ಲಿ ಎಣ್ಣೆಯನ್ನು ಬಳಕೆ ಮಾಡುತ್ತೀವಿ. ಕೆಲ ಮನೆಗಳಲ್ಲಿ ಕೊಂಚ ಪ್ರಮಾಣದಲ್ಲಿ ಬಳಕೆ ಮಾಡಿದ್ರೆ ಇನ್ನೂ ಕೆಲವು ಮನೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಳಕೆ ಮಡಲಾಗುತ್ತದೆ. ಭಾರತದಲ್ಲಿರುವ ಎಲ್ಲರೂ ಕೂಡ ಅಡುಗೆಗೆ ಒಂದೇ ರೀತಿಯ ಎಣ್ಣೆಯನ್ನು ಬಳಕೆ ಮಾಡೋದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಎಣ್ಣೆಯನ್ನು ಬಳಕೆ ಮಾಡುತ್ತಾರೆ. ಅನೇಕ ಮನೆಗಳಲ್ಲಿ ಸಸ್ಯಹಾರಿ ಎಣ್ಣೆಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಅಷ್ಟಕ್ಕು ಸಸ್ಯಹಾರಿ ಮೂಲದಿಂದ ತಯಾರಾದ ಎಣ್ಣೆಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾ? ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನಗಳಿದೆ ಅನ್ನೋದನ್ನ ತಿಳಿದುಕೊಳ್ಳೋಣ.

ಸಸ್ಯಾಧಾರಿತ ಎಣ್ಣೆಗಳು ಯಾವುದು? ಸಸ್ಯ ಮೂಲದಿಂದ ತೆಗೆದ ಕೊಬ್ಬನ್ನು ಸಸ್ಯಾಧಾರಿತ ಎಣ್ಣೆಯನ್ನಾಗಿ ಪರಿವರ್ತನೆ ಮಾಡಲಾಗುತ್ತದೆ. ಉದಾಹರಣೆಗೆ ವನಸ್ಪತಿ, ಜೋಳ, ಸಾಸಿವೆ, ಸೋಯಾ, ಹತ್ತಿ ಬೀಜ, ಬಾದಾಮಿ, ಸೂರ್ಯಕಾಂತಿ ಮುಂತಾದವುಗಳು. ಆದರೆ ಆರೋಗ್ಯದ ದೃಷ್ಟಿಯಿಂದ ಸಸ್ಯಾಧಾರಿತ ಎಣ್ಣೆಗಳು ತುಂಬಾನೇ ಉತ್ತಮ ಅಂತಾ ಹೇಳಲಾಗುತ್ತಿದೆ. ಅದ್ರಲ್ಲೂ ಹೃದಯದ ಆರೋಗ್ಯಕ್ಕೆ ಸಸ್ಯಾಧಾರಿತ ಎಣ್ಣೆಗಳು ಸಂಜೀವಿನಿ ಇದ್ದಂತೆ. ಹಾಗಾದ್ರೆ ಸಸ್ಯಾಧಾರಿತ ಎಣ್ಣೆಯನ್ನು ಸೇವಿಸೋದ್ರಿಂದ ಆರೋಗ್ಯದ ದೃಷ್ಟಿಯಿಂದ ಯಾವ ರೀತಿ ಪ್ರಯೋಜನಗಳಿದೆ ಅನ್ನೋದನ್ನ ತಿಳಿಯೋಣ.
1. ಹೃದಯದ ಆರೋಗ್ಯವನ್ನು ವೃದ್ಧಿ ಪಡಿಸುತ್ತದೆ ಹೆಚ್ಚಿನ ಸಸ್ಯಜನ್ಯ ಎಣ್ಣೆಗಳು ವಿಶಿಷ್ಟವಾದ ಕೊಬ್ಬಿನಾಮ್ಲ ಹೊಂದಿರೋದ್ರಿಂದ ಆಹಾರವನ್ನು ಪೌಷ್ಠಿಕಾಂಶಯುಕ್ತ ಹಾಗೂ ರುಚಿಕರವನ್ನಾಗಿಸಲು ಸಹಾಯ ಮಾಡುತ್ತದೆ. ಸೋಯಾಬಿನ್‌ ಎಣ್ಣೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಯಾಕಂದ್ರೆ ಅದು ನಿಮ್ಮ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಇದರಲ್ಲಿ ಮೆಗಾ 6 ಮತ್ತು ಒಮೆಗಾ 3 ಅಂಶವಿದೆ. ಹೀಗಾಗಿ ಈ ಎಣ್ಣೆಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಹೃದಯ ಕಾಯಿಲೆಗಳಿಂದ ದೂರವಿರಬಹುದು.

1. ಹೃದಯದ ಆರೋಗ್ಯವನ್ನು ವೃದ್ಧಿ ಪಡಿಸುತ್ತದೆ ಹೆಚ್ಚಿನ ಸಸ್ಯಜನ್ಯ ಎಣ್ಣೆಗಳು ವಿಶಿಷ್ಟವಾದ ಕೊಬ್ಬಿನಾಮ್ಲ ಹೊಂದಿರೋದ್ರಿಂದ ಆಹಾರವನ್ನು ಪೌಷ್ಠಿಕಾಂಶಯುಕ್ತ ಹಾಗೂ ರುಚಿಕರವನ್ನಾಗಿಸಲು ಸಹಾಯ ಮಾಡುತ್ತದೆ. ಸೋಯಾಬಿನ್‌ ಎಣ್ಣೆ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಯಾಕಂದ್ರೆ ಅದು ನಿಮ್ಮ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಇದರಲ್ಲಿ ಮೆಗಾ 6 ಮತ್ತು ಒಮೆಗಾ 3 ಅಂಶವಿದೆ. ಹೀಗಾಗಿ ಈ ಎಣ್ಣೆಯನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಹೃದಯ ಕಾಯಿಲೆಗಳಿಂದ ದೂರವಿರಬಹುದು.
2. ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಅದೊಂದು ಮಾತಿದ್ಯಲ್ಲ ದುಡಿಯೋದೇ ತಿನ್ನೋದಿಕ್ಕಾಗಿ ಎಂದು. ಪ್ರತಿಯೊಬ್ಬ ವ್ಯಕ್ತಿಯು ಮನೆ ಆಹಾರಕ್ಕಾಗಿ ಹಂಬಲಿಸುತ್ತಾನೆ. ಮನೆಯಲ್ಲಿ ರುಚಿ ರುಚಿಯಾದ ಊಟ ಸಿಕ್ಕರೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ. ಈ ಆಹಾರವನ್ನು ರುಚಿಕರವಾಗಿಸೋದು ನಾವು ಬಳಸೋ ಅಡುಗೆ ಎಣ್ಣೆಗಳು. ಮುಖ್ಯವಾಗಿ ಆಲಿವ್‌ ಎಣ್ಣೆ, ಕಡಲೆ ಎಣ್ಣೆ, ಸೋಯಾಬಿನ್‌ ಎಣ್ಣೆಗಳನ್ನು ಬಳಕೆ ಮಾಡೋದ್ರಿಂದ ಇವು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
3. ಜೀವಕ್ಕೆ ಯಾವುದೇ ರೀತಿ ಅಪಾಯವಿರೋದಿಲ್ಲ ಸಸ್ಯಜನ್ಯ ಎಣ್ಣೆಗಳು ನೈಸರ್ಗಿಕವಾಗಿ ಟ್ರಾನ್ಸ್-ಕೊಬ್ಬು ಮುಕ್ತವಾಗಿವೆ. ಪ್ರಾಣಿಜನ್ಯ ಎಣ್ಣೆಗಳಲ್ಲಿ ಟ್ರಾನ್ಸ್‌ ಕೊಬ್ಬು ಹೆಚ್ಚಾಗಿ ಇರುತ್ತದೆ. ಇದರ ಸೇವನೆಯಿಂದ ಹೃದಯದ ಕಾಯಿಲೆ, ಮಧುಮೇಹ, ಪಾರ್ಶ್ವವಾಯುವಿಗೂ ಕಾರಣವಾಗಬಹುದು. ಅಷ್ಟೇ ಅಲ್ಲ ಇವು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಪಾಮ್‌ ಎಣ್ಣೆ ಅಥವಾ ಇತರ ಕೆಲ ಎಣ್ಣೆಗಳನ್ನು ಸೇವಿಸುವಾಗ ಹುಷಾರಾಗಿರಿ ಯಾಕಂದ್ರೆ ಅದರಲ್ಲಿ ರಾಸಾಯನಿಕಗಳನ್ನು ಸೇರಿಸಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಆದಷ್ಟು ಸಸ್ಯಜನ್ಯ ಸಾವಯಾವ ಎಣ್ಣೆಯನ್ನೇ ಬಳಕೆ ಮಾಡಿ.
 4. ಋತುಚಕ್ರ ಸಮಸ್ಯೆಯನ್ನು ನಿವಾರಿಸುತ್ತದೆ ಪ್ರತಿನಿತ್ಯ ಅಕ್ಕಿ ಹೊಟ್ಟು ಎಣ್ಣೆಯನ್ನು ಸೇವಿಸುವ 90% ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಕೆಲವು ರೀತಿಯ ಋತುಚಕ್ರ ಸಮಸ್ಯೆಗಳು ನಿವಾರಣೆ ಆಗಿದ್ಯಂತೆ. ಆದ್ದರಿಂದ ಅಕ್ಕಿ ಹೊಟ್ಟು ಎಣ್ಣೆಯಂತಹ ಸಸ್ಯಜನ್ಯ ಎಣ್ಣೆಗಳನ್ನು ಸೇರಿಸುವುದು ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತೆ ಎಂದು ಅಧ್ಯಯನಗಳಿಂದ ಸಾಭೀತಾಗಿದೆ.

5. ಗರ್ಭಿಣೆಯರ ಆರೋಗ್ಯಕ್ಕೆ ತುಂಬಾನೇ ಉತ್ತಮ
ಗರ್ಭಿಣಿಯರು ಹಾಗೂ ಅವರ ಹೊಟ್ಟೆಯಲ್ಲಿರುವ ಮಗುವಿಗೆ ವಿಟಮಿನ್‌ ಕೊರತೆ ಸಾಮಾನ್ಯವಾಗಿ ಕಾಡುತ್ತದೆ. ಇಂತಹ ಸಂಧರ್ಭದಲ್ಲಿ ಸಸ್ಯಜನ್ಯ ಎಣ್ಣೆಯಿಂದ ತಯಾರು ಮಾಡಿದ ಆಹಾರವನ್ನು ಸೇವನೆ ಮಾಡಬೇಕು. ಯಾಕಂದ್ರೆ ಅದ್ರಲ್ಲಿ ವಿಟಮಿನ್‌ ಎ,ಡಿ,ಇ ಮತ್ತು ವಿಟಮಿನ್‌ ಕೆ ಸಮೃದ್ಧವಾಗಿರುತ್ತದೆ. ಇದನ್ನು ಸೇವಿಸುವುದರಿಂದ ಎಲ್ಲಾ ತರಹದ ವಿಟಮಿನ್‌ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು.

6. ಹಿಮ್ಮಡಿ ಒಡೆಯುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ
ಅನೇಕ ಜನರಿಗೆ ಪಾದ ಹಾಗೂ ಹಿಮ್ಮಡಿ ಒಡೆಯುವ ಸಮಸ್ಯೆ ಇರುತ್ತದೆ. ಕೆಲವರಿಗೆ ಚಳಿಗಾಲದಲ್ಲಿ ಮಾತ್ರ ಪಾದ ಒಡೆದರೆ ಇನ್ನೂ ಕೆಲವರಿಗೆ ಎಲ್ಲಾ ಋತುಗಳಲ್ಲಿ ಪಾದ ಒಡೆಯುತ್ತದೆ. ಇಂತಹ ಸಂದರ್ಭದಲ್ಲಿ ಸಸ್ಯಜನ್ಯ ಎಣ್ಣೆಯಾದ ತೆಂಗಿನ ಎಣ್ಣೆಯನ್ನು ಬಳಕೆ ಮಾಡಬಹುದು. ರಾತ್ರಿ ಮಲಗುವ ಸಂದರ್ಭದಲ್ಲಿ ತೆಂಗಿನ ಎಣ್ಣೆಯನ್ನು ಕಾಲಿಗೆ ಹಚ್ಚಿ ನಂತರ ಮೃದುವಾದ ಸಾಕ್ಸ್‌ ಧರಿಸಿ ಮಲಗಿ ದಿನನಿತ್ಯ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಆರೋಗ್ಯವೇ ಭಾಗ್ಯ ಹೀಗಾಗಿ ನಾವು ದಿನನಿತ್ಯ ಅಡುಗೆಗೆ ಬಳಸುವ ಎಣ್ಣೆಯ ಬಗ್ಗೆ ಕಾಳಜಿ ವಹಿಸೋದು ಒಳ್ಳೆಯದು. ಕಡಿಮೆ ಬೆಲೆಗೆ ಲಭ್ಯವಾಗುತ್ತೆ ಎಂದು ಯಾವುದೋ ಎಣ್ಣೆಯನ್ನು ಅಡುಗೆಗೆ ಬಳಕೆ ಮಾಡಿದರೆ ನಿಮ್ಮ ಪ್ರಾಣಕ್ಕೆ ಕುತ್ತು ಉಂಟಾಗಬಹುದು.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries