ಕಾಸರಗೋಡು: ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಆದರ್ಶ ಮತ್ತು ದೂರದೃಷ್ಟಿಯು ಪ್ರಪಂಚದಾದ್ಯಂತ ಅಂಗೀಕರಿಸಲ್ಪಟ್ಟಿರುವುದಾಗಿ ಕೇರಳ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ತಿಳಿಸಿದ್ದಾರೆ.
ನೀಲೇಶ್ವರ ನಗರ ಪಾಲಿಕೆ ನಿರ್ಮಿಸಿರುವ ಗಾಂಧಿ ಸ್ಮೃತಿ ಮಂಟಪವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ಆದರ್ಶಗಳನ್ನು ಹೊಸ ಪೀಳಿಗೆಗೆ ತಲುಪಿಸಬೇಕಾದ ಅನಿವಾರ್ಯತೆಯಿದೆ. ಗಾಂಧೀಜಿ ಪ್ರತಿಮೆ ಜತೆಗೆ ಗಾಂಧೀಜಿ ಪ್ರತಿಪಾದಿಸಿದ ಸ್ವಚ್ಛತೆಯ ಆದರ್ಶವನ್ನೂ ಎತ್ತಿಹಿಡಿಯುವುದರ ಜತೆಗೆ ಪಲಿಸಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
. ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಉಪಾಧ್ಯಕ್ಷ ಪಿ.ಪಿ.ಮುಹಮ್ಮದ್ ರಫಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಗೌರಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಸುಭಾಷ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಟಿ.ಪಿ.ಲತಾ, ನಗರಸಭಾ ಸದಸ್ಯರಾದ ಪಿ.ಭಾರ್ಗವಿ, ಪಿ.ಬಿಂದು, ಇ.ಶಜೀರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎಂ.ರಾಜನ್ ಮತ್ತು ಪಿ.ರಾಮಚಂದ್ರನ್, ವಕೀಲ ರಮೇಶ ಕಾರ್ಯಂಗೋಡ್, ನಾಸೀರ್, ರಜಾಕ್ ಪುಜಕ್ಕರ, ಪಿ.ಯು.ವಿಜಯಕುಮಾರ್ ಉಪಸ್ಥಿತರಿದ್ದರು. ಸಹಾಯಕ ಎಂಜಿನಿಯರ್ ವಿ.ವಿ.ಉಪೇಂದ್ರನ್ ವರದಿ ಮಂಡಿಸಿದರು. ನಗಪುರಸಭೆ ಅಧ್ಯಕ್ಷ ಟಿ.ವಿ. ಶಾಂತಾ ಸ್ವಾಗತಿಸಿದರು. ನಗರಸಭಾ ಕಾರ್ಯದರ್ಶಿ ಕೆ.ಮನೋಜ್ ಕುಮಾರ್ ವಂದಿಸಿದರು. ಶಿಲ್ಪಿ ಪ್ರೇಮ್ ಪಿ. ಲಕ್ಷ್ಮಣನ್ ಕುಞÂಮಂಗಲಂ ಕಲ್ಲಿಯೋಟ್ ಕಾವ್ ಬಳಿ ಏಳೂವರೆ ಅಡಿ ಎತ್ತರದ ರಾಷ್ಟ್ರಪಿತನ ಪೂರ್ಣಾರೂಪದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಪ್ರತಿಮೆಯನ್ನು ಸಂಪೂರ್ಣವಾಗಿ ಫೈಬರ್ ಗಾಜಿನಿಂದ ನಿರ್ಮಿಸಲಾಗಿದೆ.
ಗಾಂಧೀಜಿ ಆದರ್ಶ ಹೊಸ ಪೀಳಿಗೆಗೆ ತಲುಪಿಸಬೇಕು: ನೀಲೇಶ್ವರದಲ್ಲಿ ಗಾಂಧಿ ಸ್ಮೃತಿ ಮಂಟಪ ಲೋಕಾರ್ಪಣೆಗೊಳಿಸಿ ಸ್ಪೀಕರ್ ಎ.ಎನ್ ಶಂಸೀರ್ ಅಭಿಪ್ರಾಯ
0
ಏಪ್ರಿಲ್ 01, 2023